ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ಕಳೆದ ಶುಕ್ರವಾರ ದೂರು ನೀಡಲು ಬಂದಿದ್ದ ಹೂಡಿಕೆದಾರರು
ಆದಾಯ ಮೂಲಕ್ಕೂ ಆರ್ಥಿಕ ಸ್ಥಿತಿಗೂ ಹೊಂದಾಣಿಕೆ ಇಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿದಾಗ ಕೆಲವು ದಾಖಲೆಗಳು ಸಿಕ್ಕಿವೆ. ಆರೋಪಿಗಳ ಈಗಿನ ಆರ್ಥಿಕ ಸ್ಥಿತಿ ಹಾಗೂ ಆದಾಯ ಮೂಲ ಪರಿಶೀಲಿಸಿದಾಗ ಒಂದಕ್ಕೊಂದು ಹೊಂದಾಣಿಕೆ ಆಗುತ್ತಿಲ್ಲ. ಆರೋಪಿತರು ಹೊಂದಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ವಶಪಡಿಸಿಕೊಂಡು ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ಹಣ ವಂಚನೆಯಾಗಿದೆ. ಸೊಸೈಟಿ ಹಣವನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ತನಿಖೆ ಪೂರ್ಣವಾದ ಮೇಲೆ ಗೊತ್ತಾಗಲಿದೆ.