ಬೆಂಗಳೂರು: ವಿಜ್ಞಾನ ಲೇಖಕಿ ನಳಿನಿ ಮೂರ್ತಿ ಹೆಸರಿನಲ್ಲಿ ಅವರ ಪತಿ ಎಸ್. ನರಸಿಂಹ ಮೂರ್ತಿ ಅವರು ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದಾರೆ.
ಕೆನಡಾದ ಟೊರಾಂಟೊದಲ್ಲಿ ನೆಲೆಸಿರುವ ನರಸಿಂಹ ಮೂರ್ತಿ ಅವರು, ₹ 20 ಲಕ್ಷ ದತ್ತಿನಿಧಿಯನ್ನು ಸಂಘದಲ್ಲಿ ಇರಿಸಿದ್ದಾರೆ. ವೈಜ್ಞಾನಿಕ ಕಥನಗಳು ಹಾಗೂ ಬರಹಗಳು, ವೈದ್ಯಕೀಯ, ಸಂಕೀರ್ಣ, ಕೃಷಿ, ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಪ್ರಶಸ್ತಿಯನ್ನ ಸ್ಥಾಪಿಸಿದ್ದಾರೆ.
‘ಈ ದತ್ತಿನಿಧಿಯನ್ನು ಪ್ರಶಸ್ತಿಯ ಜತೆಗೆ ವಿಜ್ಞಾನ ಸಾಹಿತ್ಯದ ಕುರಿತಾದ ಕಮ್ಮಟ, ಪ್ರಕಟಣೆಗೆ ಬಳಸಿಕೊಳ್ಳಬೇಕೆಂಬುದು ನರಸಿಂಹ ಮೂರ್ತಿ ಅವರ ಆಶಯವಾಗಿದೆ. ನಳಿನಿ ಮೂರ್ತಿ ಅವರು ‘ಬಿಸಿಲು ಮಳೆ’, ‘ಬೀಸಿ ಬಂದ ಬಿರುಗಾಳಿ’, ‘ಬಂಗಾರದ ಜಿಂಕೆ’ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ’ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.