ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ರೂಪದಲ್ಲಿ ’ಇವಿ ಮಿತ್ರ’ ಆ್ಯಪ್‌

ಹಳೆಯದನ್ನು ತೆಗೆಯಿರಿ, ಹೊಸದನ್ನು ಅಪ್‌ಡೇಟ್ ಮಾಡಿ
Published : 10 ಸೆಪ್ಟೆಂಬರ್ 2024, 15:29 IST
Last Updated : 10 ಸೆಪ್ಟೆಂಬರ್ 2024, 15:29 IST
ಫಾಲೋ ಮಾಡಿ
Comments

ಬೆಂಗಳೂರು: ಎಲೆಕ್ಟ್ರಿಕ್‌ ವಾಹನ(ಇವಿ) ಬಳಕೆದಾರರಿಗೆ ಚಾರ್ಜಿಂಗ್ ಕೇಂದ್ರಗಳ ಮಾಹಿತಿ, ಹಣ ಪಾವತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿರುವ ಬೆಸ್ಕಾಂನ 'ಇವಿ ಮಿತ್ರ' ಆ್ಯಪ್‌ ಈಗ ಹೊಸ ರೂಪ ಪಡೆದುಕೊಂಡಿದೆ.

ಹಳೆಯ ’ಇವಿ ಮಿತ್ರ’ ಆ್ಯಪ್‌ನಲ್ಲಿ ಕೆಲವೊಂದು ಸಮಸ್ಯೆಗಳಿರುವ ಕುರಿತು ಕೆಲ ಗ್ರಾಹಕರು ಬೆಸ್ಕಾಂ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಇಲಾಖೆ, ಆ್ಯಪ್‌ ತಂತ್ರಾಂಶದಲ್ಲಿ ಒಂದಷ್ಟು ಸುಧಾರಣೆಗಳನ್ನು ಮಾಡಿದೆ.

ಆ್ಯಂಡ್ರಾಯ್ಡ್ ಮತ್ತು ಐಒಎಸ್‌ ಎರಡು ಮೊಬೈಲ್‌ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಹೊಸ 'ಇವಿ ಮಿತ್ರ' ಆ್ಯಪ್‌, ಬಳಕೆದಾರರ ಪ್ರೊಫೈಲ್‌ ನಿರ್ವಹಣೆ, ಚಾರ್ಜಿಂಗ್‌ ಸ್ಟೇಷನ್‌ಗಳ ವೀಕ್ಷಣೆಯೊಂದಿಗೆ ಮಾಹಿತಿ, ಚಾರ್ಜಿಂಗ್‌ ಪ್ರಕ್ರಿಯೆ, ಬುಕ್ಕಿಂಗ್‌ ವಿವರ, ಚಾರ್ಜಿಂಗ್‌ ಸ್ಟೇಷನ್‌ಗಳಲ್ಲಿರುವ ಸೌಕರ್ಯಗಳು ಮತ್ತು ಚಾರ್ಜಿಂಗ್‌ ಕಾಯ್ದಿರಿಸುವ ಸೌಲಭ್ಯ ಹೊಂದಿದೆ.

ಗ್ರಾಹಕರು ಹಳೆಯ 'ಇವಿ ಮಿತ್ರ' ಆ್ಯಪ್ ಡಿಲೀಟ್ ಮಾಡಿ, https://onelink.to/evmithra ಲಿಂಕ್‌ ಮೂಲಕ ಹೊಸ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ವ್ಯಾಲೆಟ್‌ನಲ್ಲಿ ಹಣ ಉಳಿದಿದ್ದರೂ ಚಿಂತಿಸಬೇಕಿಲ್ಲ. ಹೊಸ ಆ್ಯಪ್‌ಗೆ ಆ ಹಣ ವರ್ಗಾವಣೆಯಾಗುತ್ತದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ದೇಶದಲ್ಲೇ ಅತಿ ಹೆಚ್ಚು ಚಾರ್ಚಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿರುವ ಕರ್ನಾಟಕ ಇದೀಗ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನ ಇಂಧನ ಕ್ಷೇತ್ರವನ್ನು ಮುಂಚೂಣಿಯತ್ತ ಕೊಂಡೊಯ್ಯಲು ನೆರವಾಗಲಿದೆ
ಕೆ.ಜೆ. ಜಾರ್ಜ್, ಇಂಧನ ಸಚಿವರು

ಕನ್ನಡ, ಹಿಂದಿ, ಇಂಗ್ಲಿಷ್‌ ಹಾಗೂ ಪ್ರಾದೇಶಿಕ ಭಾಷೆಗಳು ಸೇರಿದಂತೆ 11 ಭಾಷೆಗಳಲ್ಲಿ ಇವಿ ಚಾರ್ಜಿಂಗ್‌ ಮಾಹಿತಿ ಲಭ್ಯವಿದ್ದು, ಹಣ ಪಾವತಿಗೆ ಹಲವು ಆಯ್ಕೆಗಳೂ ಇವೆ. ರಿಟೇಲ್‌ ಬಳಕೆದಾರರ ಶುಲ್ಕದ ವಿವರ, ಬಿಲ್ಲಿಂಗ್, ಪ್ರೊಫೈಲ್ ಇರುತ್ತದೆ.

ಆ್ಯಪ್‌ ಬಳಕೆ ಹೇಗೆ ?

ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ನಿಮ್ಮ ಫೋನ್‌ ನಂಬರ್‌ ನಮೂದಿಸಿ, ಲಾಗಿನ್‌ ಆಗಿ. ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಸಂಖ್ಯೆ ದಾಖಲಿಸಿದ ನಂತರ, ಲಾಗಿನ್‌ ಖಚಿತವಾಗುತ್ತದೆ. ಖಾಸಗಿ ಹಾಗೂ ವಾಣಿಜ್ಯ ಬಳಕೆದಾರರು ಈ ಒಂದೇ ಆ್ಯಪ್‌ ಮೂಲಕ ಚಾರ್ಜಿಂಗ್ ಸೌಲಭ್ಯ ಪಡೆಯಬಹುದು. ಮ್ಯಾಪ್‌ ಮೂಲಕ ಚಾರ್ಜಿಂಗ್ ಕೇಂದ್ರಗಳ ಮಾಹಿತಿ ಪಡೆಯಬಹುದು.

ಸುಲಭ ಪಾವತಿ ಹಾಗೂ ಮರು ಪಾವತಿ:

ರಿಟೇಲ್‌ ಬಳಕೆದಾರರು ಆ್ಯಪ್‌ನಲ್ಲಿ ಲಭ್ಯವಿರುವ ವಾಲೆಟ್‌ಗೆ ಹಣ ಭರ್ತಿ ಮಾಡಿ ಶುಲ್ಕ ಪಾವತಿಸಬಹುದು. ಯುಪಿಐ ಮತ್ತು ಬಿಲ್‌ ಡೆಸ್ಕ್‌ ಮೂಲಕವೂ ಶುಲ್ಕ ಪಾವತಿಗೆ ಅವಕಾಶವಿದೆ. ತಾಂತ್ರಿಕ ಅಡಚಣೆಯಿಂದಾಗಿ ಚಾರ್ಜಿಂಗ್‌ ಸ್ಥಗಿತಗೊಂಡರೆ ಬಳಕೆದಾರರಿಗೆ ಹಣ ಮರು ಪಾವತಿಯಾಗಲಿದೆ. ವಾಣಿಜ್ಯ ಬಳಕೆದಾರಿಗೂ ವಿಶೇಷ ಸೌಲಭ್ಯ ಇದ್ದು ತಮ್ಮ ವಾಹನಗಳ ಚಾಲಕರ ಚಲನೆ/ಚಾರ್ಜಿಂಗ್‌ ವಿವರದ ಬಗ್ಗೆ ನಿಗಾವಹಿಸಬಹುದು. ಸ್ಪೆಷಲ್‌ ಆ್ಯಕ್ಸಿಸ್‌ ಕೋಡ್‌ ಅಲ್ಲದೇ ವಿಶೇಷ ಸೌಲಭ್ಯಗಳನ್ನು ಪಡೆಯಬಹುದು.

ವಾಟ್ಸ್‌ಆ್ಯಪ್‌ ಬೆಂಬಲ: ಯಾವುದೇ ಚಾರ್ಜಿಂಗ್ ಅಪ್ಲಿಕೇಶನ್ ಇಲ್ಲದೆಯೂ ಇವಿ ವಾಹನಗಳನ್ನು ಚಾರ್ಚ್‌ ಮಾಡಲು ಬೆಸ್ಕಾಂ 'ಇವಿ ಮಿತ್ರ ಬಾಟ್‌'- ವಾಟ್ಸ್‌ ಆ್ಯಪ್‌ ನೆರವು ಪಡೆಯಬಹುದು. ಲಿಂಕ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT