ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಗಳು ಇತಿಹಾಸದ ಭಾಗ: ಗವಿಸಿದ್ದಯ್ಯ

Last Updated 10 ಜನವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ದೇಶದ ಸಂಸ್ಕೃತಿ ನಾಶವಾದರೇ, ಆ ದೇಶದ ಇತಿಹಾಸವೇ ನಾಶವಾದಂತೆ’ ಎಂದು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕ ಗವಿಸಿದ್ದಯ್ಯ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಇತಿಹಾಸ ವಸ್ತು ಸಂಗ್ರಹಾಲಯ ಮತ್ತು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಚಾರಿತ್ರಿಕ ದಾಖಲೆಗಳು ಮತ್ತು ಛಾಯಾ ಚಿತ್ರಗಳ ಪ್ರದರ್ಶನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತಿಹಾಸದ ಪತ್ರ ವ್ಯವಹಾರಗಳು, ಒಪ್ಪಂದಗಳು, ಕರಡುಪ್ರತಿಗಳು ಹಾಗೂ ಇತರೆ ಹಳೆಯ ದಾಖಲೆಗಳನ್ನು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸಂರಕ್ಷಿಸಿದೆ. ಪತ್ರಾಗಾರ ಇಲಾಖೆಯಲ್ಲೇ ಹಳೆಯ ಪತ್ರವಾದ ನಾಲ್ಕನೇ ಆಂಗ್ಲೋ–ಮೈಸೂರು ಯುದ್ಧದ ಶ್ರೀರಂಗ ಪಟ್ಟಣ ಒಪ್ಪಂದ ಪ್ರತಿಯನ್ನು ಸಂರಕ್ಷಿಸಲಾಗಿದೆ. ಮೈಸೂರು ರಾಜರ ಮತ್ತು ದಿವಾನರ ಸಹಿಗಳನ್ನು ಪತ್ರಾಗಾರ ಇಲಾಖೆಯಲ್ಲಿ ಸಂಗ್ರಹಿಸಿರಿಸಲಾಗಿದೆ. ಹೀಗೆ ಹಲವಾರು ಇಲಾಖೆಗಳ ದಾಖಲಾತಿಗಳನ್ನು ರಾಜ್ಯ ಪತ್ರಾಗಾರ ಇಲಾಖೆಯು ಸಂಗ್ರಹಿಸಿದೆ. ಇತಿಹಾಸದ ಪರಂಪರೆಯೆಂದರೆ ಕಟ್ಟಡಗಳು, ಉಡುಗೆ–ತೊಡುಗೆಗಳು, ಸ್ಮಾರಕಗಳು ಹಾಗೂ ನಾಣ್ಯಗಳು ಅಷ್ಟೇ ಅಲ್ಲ, ದಾಖಲೆಗಳ ಪರಂಪರೆಯು ಇತಿಹಾಸದ ಭಾಗವೇ ಆಗಿದೆ’ ಎಂದು ತಿಳಿಸಿದರು.

ಛಾಯಾ ಚಿತ್ರಗಳ ಪ್ರದರ್ಶನದಲ್ಲಿ ಮೈಸೂರು ಸಂಸ್ಥಾನದ ಆದೇಶಗಳು, ಪತ್ರ ವ್ಯವಹಾರಗಳು, ಸುತ್ತೋಲೆಗಳು. ಮೈಸೂರು ಮಹಾರಾಜರು ಮತ್ತು ದಿವಾನರ ಛಾಯಾ ಚಿತ್ರಗಳು, ಆಹ್ವಾನ ಪತ್ರಗಳು, ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಛಾಯಾ ಚಿತ್ರಗಳು ಸೇರಿದಂತೆ 120ಕ್ಕೂ ಹೆಚ್ಚಿನ ದಾಖಲೆಗಳು ಮತ್ತು ಛಾಯಾ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಕುಲಸಚಿವ ಎನ್‌. ಮಹೇಶ್ ಬಾಬು ಪ್ರದರ್ಶನವನ್ನು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT