ಗುವಾಹಟಿ: ಆತಿಥೇಯ ಭಾರತ ವಿರುದ್ಧ ಇಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 408 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ನಾಯಕನಾಗಿ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ.
.IND vs SA | ದ.ಆಫ್ರಿಕಾ ವಿರುದ್ಧ ಹೀನಾಯ ಸೋಲು: ಕೋಚ್ ಗಂಭೀರ್ ಹೇಳಿದ್ದಿಷ್ಟು.ದ.ಆಫ್ರಿಕಾ ಎದುರು ಮುಖಭಂಗ: WTC ಪಾಯಿಂಟ್ ಪಟ್ಟಿಯಲ್ಲಿ ಪಾಕ್ಗಿಂತ ಕೆಳಗಿಳಿದ ಭಾರತ.
ಅವರು ನಾಯಕನಾಗಿ ಮುನ್ನಡೆಸಿದ ಮೊದಲ 12 ಟೆಸ್ಟ್ ಪಂದ್ಯಗಳಲ್ಲಿ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹಾಗೂ ಒಂದು ಪಂದ್ಯ ಡ್ರಾಗೊಂಡಿದೆ. ಆ ಮೂಲಕ ನಾಯಕನಾಗಿ ಮೊದಲ 12 ಪಂದ್ಯಗಳಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿದ ನಾಯಕ ಎಂಬ ಖ್ಯಾತಿಗೆ ಭಾಜನಾರದರು.

ಈ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇದ್ದು, ಅವರು ನಾಯಕರಾಗಿ ಮೊದಲ 12 ಟೆಸ್ಟ್ ಪಂದ್ಯಗಳಲ್ಲಿ 10ರಲ್ಲಿ ಗೆಲುವು ದಾಖಲಿಸಿದ್ದರು.

ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಲಿಂಡ್ಸೆ ಹ್ಯಾಸೆಟ್ ಇದ್ದು ಅವರು ಮೊದಲ 12 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.

ತವರಿನಲ್ಲಿ ಮೂರನೇ ಭಾರಿ ವೈಟ್ ವಾಷ್ ಮುಖಭಂಗ

ಭಾರತ ಈ ಸರಣಿಯ ಸೋಲಿನೊಂದಿಗೆ ಮೂರನೇ ಭಾರಿ ತವರು ನೆಲದಲ್ಲಿ ವೈಟ್ ವಾಷ್ ಮುಖಭಂಗ ಅನುಭವಿಸಿದೆ.

2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದವೇ 0–2 ಅಂತರದಲ್ಲಿ ಭಾರತ ಸೋತಿತ್ತು. ಇನ್ನೂ 2024 ರಲ್ಲಿ ತವರಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ 0–3 ಅಂತರದಲ್ಲಿ ಸೋತಿತ್ತು. ಇದೀಗ ಮತ್ತೊಮ್ಮೆ 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ 0–2 ಅಂತರದಲ್ಲಿ ಸೋಲುವ ಮೂಲಕ ಮೂರನೇ ಭಾರಿ ವೈಟ್ ವಾಷ್ ಮುಖಭಂಗ ಅನುಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.