ಭಾನುವಾರ, ಡಿಸೆಂಬರ್ 6, 2020
19 °C
ಹಣ ಬಾಕಿ ಉಳಿಸಿಕೊಂಡಿರುವ ಫ್ಲ್ಯಾಟ್ ಖರೀದಿದಾರರು

ಬಡ್ಡಿರಹಿತ ಪಾವತಿಗೆ ಡಿ.31ರವರೆಗೆ ಅವಕಾಶ: ಬಿಡಿಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಸತಿ ಸಮುಚ್ಚಯಗಳಲ್ಲಿ ಫ್ಲ್ಯಾಟ್‌ ಖರೀದಿಸಿ, ಅದರ ಹಣ ಬಾಕಿ ಉಳಿಸಿಕೊಂಡವರು 2020ರ ಡಿ.31ರ ಒಳಗೆ ಬಡ್ಡಿರಹಿತವಾಗಿ ಪೂರ್ಣ ಮೌಲ್ಯ ಪಾವತಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅವಕಾಶ ನೀಡಿದೆ.

ಬಿಡಿಎ ವಿವಿಧೆಡೆ ನಿರ್ಮಿಸಿರುವ ವಸತಿ ಸಮುಚ್ಚಯಗಳಲ್ಲಿ ವಸತಿ ಖರೀದಿಸಿರುವ ಅನೇಕರು ಭಾಗಶಃ ಮೊತ್ತ ಪಾವತಿಸಿ ಹಂಚಿಕೆ ಪತ್ರ ಪಡೆದಿದ್ದಾರೆ. ಬಿಡಿಎ ನೋಟಿಸ್‌ಗಳನ್ನು ನೀಡಿದ ಬಳಿಕವೂ ಬಾಕಿ ಮೊತ್ತ ಪಾವತಿಸಿಲ್ಲ.

ಫ್ಲ್ಯಾಟ್‌ನ ಪೂರ್ಣ ಮೌಲ್ಯವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದರೆ ಬಿಡಿಎ ಬಡ್ಡಿಯನ್ನು ವಿಧಿಸುತ್ತದೆ. ಆದರೆ, ಫ್ಲ್ಯಾಟ್‌ ಖರೀದಿಸಿದವರು ಈ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಬಡ್ಡಿರಹಿತವಾಗಿ ಹಣ ಪಾವತಿಸಲು ಅವಕಾಶ ಕಲ್ಪಿಸುವ ಬಗ್ಗೆ ಬಿಡಿಎ ಆ.28 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವನ್ನು ಕೈಗೊಂಡಿತ್ತು.  

‘ಡಿ. 31ರ ಒಳಗೂ ಬಾಕಿ ಹಣ ಪಾವತಿ ಮಾಡದಿದ್ದರೆ ಯಾವುದೇ ಮುನ್ಸೂಚನೆ ನೀಡದೆ ಫ್ಲ್ಯಾಟ್‌ ಹಂಚಿಕೆ ಯನ್ನು ಏಕಪಕ್ಷೀಯವಾಗಿ ರದ್ದುಪಡಿಸಲಾಗುತ್ತದೆ’ ಎಂದು ಬಿಡಿಎ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು