ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು, ವಲಸೆ ಕಾರ್ಮಿಕರ ಹಿತ ಕಾಪಾಡಲು ವಿಫಲ: ಮಲ್ಲಿಕಾರ್ಜುನ ಖರ್ಗೆ

Last Updated 1 ಜೂನ್ 2020, 21:41 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ 19 ಸಂಕಷ್ಟ ಎದುರಿಸುವಲ್ಲಿ ಹಾಗೂ ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ಕೈಗಾರಿಕೋದ್ಯಮಿಗಳ ಹಿತ ಕಾಪಾಡಲು ಕೇಂದ್ರ– ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೋವಿಡ್ -19ನಿಂದ ಇಡೀ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಕೂಲಿ ಕಾರ್ಮಿಕರು ತೊಂದರೆಯಲ್ಲಿದ್ದಾರೆ.ಆದರೆ, ಸರ್ಕಾರ ತಲೆಕೆಡಿಸಿಕೊಂಡಿಲ್ಲ’ ಎಂದರು.

‘ಕೊರೊನಾ ಪ್ರಕರಣಗಳು ಕಡಿಮೆ ಇದ್ದಾಗ ಲಾಕ್‌ಡೌನ್ ಬಿಗಿಗೊಳಿಸಿ, ಪ್ರಕರಣ ಹೆಚ್ಚಿದ ಬಳಿಕ ನಿರ್ಬಂಧ ಸಡಿಲಿಸಲಾಗಿದೆ. ಜನರಿಗೆ ತೊಂದರೆ ಮಾಡಲೆಂದೇ ಕೇಂದ್ರ ಈ ನಿರ್ಣಯ ತೆಗೆದು
ಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಾತಿ
ಬೆಂಗಳೂರು:
ಯೋಗಗಂಗೋತ್ರಿ ಸಂಸ್ಥೆಯು ರಾಮನಗರ ಜಿಲ್ಲೆಯ ಸುಗ್ಗನಹಳ್ಳಿಯಲ್ಲಿ ನಡೆಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ವಿದ್ಯಾರ್ಥಿ ನಿಲಯ ‘ಬೆಳಕು’ ಆಶ್ರಮಕ್ಕೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.

ಗ್ರಾಮೀಣ ಭಾಗದ ಐದನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ವರೆಗಿನ ಬಡ ಹಾಗೂ ನಿರಾಶ್ರಿತ ಗಂಡು ಮಕ್ಕಳು ಪ್ರವೇಶ ಪಡೆಯಬಹುದು. ಆಶ್ರಮದಲ್ಲಿ ಉಚಿತ ವಸತಿ, ಊಟ ಹಾಗೂ ಶಿಕ್ಷಣ ವೆಚ್ಚ ಭರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎನ್.ಆರಾಧ್ಯ ತಿಳಿಸಿದ್ದಾರೆ. ಸಂಪರ್ಕ: 8884646108

‌ಕಲಾಪ ಸ್ಥಗಿತ: ಸಿ.ಜೆ.ಎಚ್ಚರಿಕೆ
ಬೆಂಗಳೂರು:
‘ವೈಯಕ್ತಿಕ ಅಂತರ ಕಾಯ್ದುಕೊಳ್ಳುವಲ್ಲಿ ವಕೀಲರು ನಿರ್ಲಕ್ಷ್ಯ ತೋರುತ್ತಿದ್ದು; ಒಂದು ವೇಳೆ ಸೂಕ್ತ ಸಹಕಾರ ಮತ್ತು ಬೆಂಬಲ ನೀಡದೆ ಹೋದರೆ ಕೋರ್ಟ್ ಕಲಾಪ ಸ್ಥಗಿತಗೊಳಿಸಬೇಕಾಗುತ್ತದೆ’ ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.

ಲಾಕ್ ಡೌನ್ ನಿಯಮ ಸಡಿಲಿಕೆ ನಂತರ ಸೋಮವಾರ ಹೈಕೋರ್ಟ್‌ನ ಪ್ರಧಾನಪೀಠ ಹಾಗೂ ನಗರದ ವಿಚಾರಣಾ ನ್ಯಾಯಾಲಯಗಳಲ್ಲಿ ಸೀಮಿತ ಪ್ರಮಾಣದಲ್ಲಿ ಕಲಾಪ ಪುನರಾರಂಭಕ್ಕೆ ಚಾಲನೆ ನೀಡಲಾಯಿತು.

ವಕೀಲರಿಗೆ ಹಾಗೂ ಅವರ ಕ್ಲರ್ಕ್ ಗಳಿಗೆ ಮಾತ್ರವೇ ಒಳಬಿಡಲಾಯಿತು. ಸಾಕಷ್ಟು ವಕೀಲರು ಮತ್ತು ಕಕ್ಷಿದಾರರಿಗೆ ಪ್ರವೇಶ ನಿರಾಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT