ಬೆಂಗಳೂರು: ಇಲ್ಲಿನ ಎಚ್ಎಎಲ್ ನಿವಾಸಿ ಕವಿತಾ ಅವರು ಈಜಿಪ್ಟ್ನಲ್ಲಿ ಇತ್ತೀಚೆಗೆ ನಡೆದ ಫ್ಯಾಷನ್ ಕ್ರೌನ್ ವೀಕ್–2024 ಸ್ಪರ್ಧೆಯಲ್ಲಿ ಮಿಸೆಸ್ ಇಂಟರ್ನ್ಯಾಷನಲ್ ಗರಿಮೆಗೆ ಪಾತ್ರರಾಗಿದ್ದಾರೆ.

ಮಹಿಳಾ ಸಬಲೀಕರಣ ಘೋಷವಾಕ್ಯ ಇಟ್ಟುಕೊಂಡು ನಡೆದ ಈ ಸ್ಪರ್ಧೆಯಲ್ಲಿ 15 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತವನ್ನು ಪ್ರತಿನಿಧಿಸಿದ್ದ ಕವಿತಾ ಅವರು ಭಾರತದ ಸಂಸ್ಕೃತಿಯಲ್ಲಿ ಮಹಿಳಾ ಸಬಲೀಕರಣ ಹಿಂದಿನಿಂದಲೂ ಇರುವುದನ್ನು ಪ್ರಚುರಪಡಿಸಿದರು. ಸರಸ್ವತಿ, ಲಕ್ಷ್ಮೀ, ದುರ್ಗೆಯರ ಪಾತ್ರಗಳು ಹೇಗೆ ಮಹಿಳಾ ಪ್ರಧಾನವಾಗಿದ್ದವು ಎಂಬುದನ್ನು ಕವಿತಾ ವಿವರಿಸಿದ್ದರು. ಸೌಂದರ್ಯ, ಅನುಗ್ರಹ, ಶಕ್ತಿ, ಬುದ್ಧಿವಂತಿಕೆಯನ್ನು ಪ್ರತಿನಿಧಿಸುವ ದೇವಿಯ ವೇಷಭೂಷಣದಲ್ಲಿ ಹೆಜ್ಜೆ ಹಾಕಿದ್ದರು. ಇದು ಅವರಿಗೆ ಮಿಸೆಸ್ ಇಂಟರ್ನ್ಯಾಷನಲ್ ಕಿರೀಟ ತೊಡಿಸುವಂತೆ ಮಾಡಿತ್ತು.

‘ನಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡಬಾರದು. ಕನಸುಗಳನ್ನು ನನಸಾಗಿಸುವ ಶಕ್ತಿ ನಮಗಿದೆ’ ಎಂದು ಕವಿತಾ ತಿಳಿಸಿದರು.

ಕವಿತಾ ಅವರು ಮಲೇಷ್ಯಾದಲ್ಲಿ ನಡೆದ ಗ್ಲಾಮರಸ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.