ಬೆಂಗಳೂರು: ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸುವ ಆದೇಶ ಹೊರಬೀಳುತ್ತಿದ್ದಂತೆ ಹುಮ್ಮಸ್ಸಿನಿಂದ ಸ್ಟಿಕರ್ ವಿತರಿಸಿದ್ದ ಬ್ಯಾಂಕ್‌ಗಳಲ್ಲಿ ಇದೀಗ ಸ್ಟಿಕರ್‌ಗಳೇ ಸಿಗುತ್ತಿಲ್ಲ. ಎಲ್ಲ ಬ್ಯಾಂಕ್‌ಗಳು ಬರೀ ನೋಂದಣಿಗಷ್ಟೇ ಸೀಮಿತವಾಗಿದ್ದು, ಸ್ಟಿಕರ್‌ಗಾಗಿ ತಿಂಗಳುಗಟ್ಟಲೇ ಕಾಯಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಕೆಲ ಶಾಖೆಗಳಿಗೆ ಮಂಗಳವಾರ ಭೇಟಿ ನೀಡಿದಾಗ, ‘ಫಾಸ್ಟ್ಯಾಗ್ ಸ್ಟಿಕರ್ ಸಂಗ್ರಹವಿಲ್ಲ. ಬೇಕಾದರೆ ನೋಂದಣಿ ಮಾತ್ರ ಮಾಡುತ್ತೇವೆ. ಸ್ಟಿಕರ್ ಯಾವಾಗ ಸಿಗುತ್ತದೆ ಎಂಬು
ದನ್ನು ಹೇಳಲಾಗದು’ ಎಂದು ಸಿಬ್ಬಂದಿ ಹೇಳಿದರು.

‘ಆರಂಭದಲ್ಲಿ ನೋಂದಣಿ ಜೊತೆಗೇ ಸ್ಟಿಕರ್ ಕೊಡುತ್ತಿದ್ದೆವು. ಇದೀಗ ನೋಂದಾಯಿತ ಗ್ರಾಹಕರ ಮನೆಗೇ ಅಂಚೆ ಮೂಲಕ ಸ್ಟಿಕರ್ ಹೋಗುತ್ತಿದೆ. ಎಷ್ಟೋ ಮಂದಿಗೆ ಸ್ಟಿಕರ್ ತಲುಪಿದೆಯೋ ಗೊತ್ತಿಲ್ಲ. ಸಿಕ್ಕಿಲ್ಲ ಎನ್ನುವವರೇ ಹೆಚ್ಚಿದ್ದಾರೆ’ ಎಂದು ಸಿಬ್ಬಂದಿ ತಿಳಿಸಿದರು.

‘ಫಾಸ್ಟ್ಯಾಗ್ ಕಡ್ಡಾಯವನ್ನು ಜ. 15ಕ್ಕೆ ಮುಂದೂಡಲಾಗಿದೆ. ಅಷ್ಟರೊಳಗಾಗಿ ಎಲ್ಲ ಗ್ರಾಹಕರಿಗೆ ಸ್ಟಿಕರ್ ನೀಡಲು ಸಾಧ್ಯವಿಲ್ಲ. ಏಕೆಂದರೆ, ಬೇಡಿಕೆಗೆ ತಕ್ಕಷ್ಟು ಸ್ಟಿಕರ್‌ಗಳು ಪೂರೈಕೆ ಆಗುತ್ತಿಲ್ಲ. ಗ್ರಾಹಕರು ಜಗಳ ಮಾಡಬಾರದೆಂದು ಅಂಚೆ ಮೂಲಕ ಬರುತ್ತದೆಂದು ಹೇಳಿ ಕಳುಹಿಸುತ್ತಿದ್ದೇವೆ’ ಎಂದು ಸಿಬ್ಬಂದಿ ಹೇಳಿದರು.

ಖಾತೆ ಇದ್ದರಷ್ಟೇ ಫಾಸ್ಟ್ಯಾಗ್: ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಸಿಂಡಿಕೇಟ್ ಹಾಗೂ ಕೆನರಾ ಬ್ಯಾಂಕ್‌ನವರು ತಮ್ಮಲ್ಲಿ ಖಾತೆ ಹೊಂದಿರುವವರಿಗೆ ಮಾತ್ರ ಫಾಸ್ಟ್ಯಾಗ್ ನೋಂದಣಿ ಮಾಡಿಕೊಡುತ್ತಿದ್ದಾರೆ. ಅಲ್ಲಿಯೂ ನೋಂದಾಯಿತ ಬಹುತೇಕ ಗ್ರಾಹಕರಿಗೆ ಸ್ಟಿಕರ್ ಸಿಕ್ಕಿಲ್ಲ. ಕೇಳಿದರೆ, ‘ಸ್ಟಿಕರ್ ನೋ ಸ್ಟಾಕ್’ ಎಂದೇ ಸಿಬ್ಬಂದಿ ಹೇಳುತ್ತಿದ್ದಾರೆ.

ಐಸಿಐಸಿಐ ಬ್ಯಾಂಕ್‌ನ ಬಸವೇಶ್ವರನಗರ ಶಾಖೆಯಲ್ಲಿ ಪ್ರತ್ಯೇಕ್ ಕೌಂಟರ್ ಇದ್ದು, ಫಾಸ್ಟ್ಯಾಗ್ ಪಡೆಯಲು ಗ್ರಾಹಕರು ಬರುತ್ತಿದ್ದಾರೆ. ನೋಂದಾಯಿತರಿಗೆ ಮಾತ್ರ 7 ದಿನ ಬಿಟ್ಟು ಸ್ಟಿಕರ್ ಕೈಗೆ ಸಿಗುವುದಾಗಿ ಹೇಳಿ ಕಳುಹಿಸಲಾಗುತ್ತಿದೆ.

ಸಿಂಡಿಕೇಟ್ ಬ್ಯಾಂಕ್‌ನ ರಾಜಾಜಿನಗರದ ಕಾರ್ಡ್ ರಸ್ತೆ ಶಾಖೆ, ಎಸ್‌ಬಿಐ ಬ್ಯಾಂಕ್‌ನ ರಾಜಾಜಿ
ನಗರದ ಮೋದಿ ಆಸ್ಪತ್ರೆ ರಸ್ತೆ ಶಾಖೆ, ಕೆನರಾ ಬ್ಯಾಂಕ್ ಶೇಷಾದ್ರಿಪುರ ಶಾಖೆ
ಯಲ್ಲೂ ಇದೇ ಸ್ಥಿತಿ ಇದೆ. ‘ಫಾಸ್ಟ್ಯಾಗ್ ಕೇಳಲೇಬೇಡಿ. ಬೇಕಾದರೆ ನೋಂದಣಿ ಅರ್ಜಿ ಕೊಡುತ್ತೇವೆ. ಭರ್ತಿ ಮಾಡಿ ಕೊಡಿ, ಮುಂದೆ ನೋಡೋಣ’ ಎಂದೇ ಎಲ್ಲರೂ ಹೇಳುತ್ತಿದ್ದಾರೆ.

‘ಬ್ಯಾಂಕ್‌ನಲ್ಲಿ ತ್ವರಿತವಾಗಿ ಫಾಸ್ಟ್ಯಾಗ್ ಸಿಗುವುದಿಲ್ಲ. ಟೋಲ್‌ಗೇಟ್ ಬಳಿ ಇರುವ ಕೌಂಟರ್‌ಗೆ ಹೋದರೆ ಸ್ಥಳದಲ್ಲೇ ಫಾಸ್ಟ್ಯಾಗ್ ಸಿಗುತ್ತದೆ’ ಎಂದು ಸಿಬ್ಬಂದಿಯೇ ಗ್ರಾಹಕರಿಗೆ ಹೇಳುತ್ತಿದ್ದಾರೆ.

ಖಾತೆ ಇಲ್ಲದಿದ್ದರೂ ನೋಂದಣಿ: ಆಕ್ಸಿಸ್ ಬ್ಯಾಂಕ್‌ನ ಬಸವೇಶ್ವರನಗರ ಶಾಖೆಯಲ್ಲಿ ಖಾತೆ ಇಲ್ಲದಿದ್ದರೂ ಫಾಸ್ಟ್ಯಾಗ್‌ಗೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಆದರೆ, ಅಲ್ಲಿಯೇ ಸ್ಟಿಕರ್‌ಗಳ ಕೊರತೆ ಹೆಚ್ಚಿದೆ. ಶಾಖೆಯಲ್ಲಿ ಪ್ರತ್ಯೇಕ ಕೌಂಟರ್ ಇದೆ. ಸ್ಟಿಕರ್ ಕೊರತೆ ಇರುವುದರಿಂದ ಗ್ರಾಹಕರು ಕೌಂಟರ್ ಬಳಿ ಸುಳಿಯುತ್ತಿಲ್ಲ. ಬಂದ ಕೆಲವೇ ಜನರಿಗೂ 15ರಿಂದ 20 ದಿನಗಳ ನಂತರವೇ ಸ್ಟಿಕರ್ ಸಿಗುವುದಾಗಿ ಹೇಳಿ ಕಳುಹಿಸಲಾಗುತ್ತಿದೆ.

‘ನೋಂದಣಿ ಮಾಡಿಸಿ ತಿಂಗಳಾದರೂ ಸ್ಟಿಕರ್ ಬಂದಿಲ್ಲ. ಕೇಳಿದರೆ ನಾಳೆ, ನಾಡಿದ್ದು ಬರುತ್ತೆ ಎನ್ನುತ್ತಿದ್ದಾರೆ. ಹೆಚ್ಚು ವಿಚಾರಿಸಿದರೆ, ನಾವೇನು ಸ್ಟಿಕರ್ ತಯಾರಿಸುವುದಿಲ್ಲವೆಂದು ಹೇಳುತ್ತಿದ್ದಾರೆ’ ಎಂದು ರಾಜಾಜಿನಗರದ ಆರ್. ಮಂಜುನಾಥ್ ತಿಳಿಸಿದರು.

‘ಬ್ಯಾಂಕ್ ಸಿಬ್ಬಂದಿಗೇ ಸ್ಟಿಕರ್ ಸಾಲುತ್ತಿಲ್ಲ’

‘ನೋಂದಾಯಿತ ಗ್ರಾಹಕರಿಗೆ ನೀಡಲು 50 ಸ್ಟಿಕರ್ ಕೇಳಿದ್ದೆವು. ಕೇವಲ 10 ಸ್ಟಿಕರ್ ಪೂರೈಸಿದ್ದು, ಅವು ನಮ್ಮ ಸಿಬ್ಬಂದಿಗೇ ಸಾಲಲಿಲ್ಲ’ ಎಂದು ಬ್ಯಾಂಕ್ ಶಾಖೆಯೊಂದರ ವ್ಯವಸ್ಥಾಪಕರೊಬ್ಬರು ಹೇಳಿದರು.

‘ಸ್ಟಿಕರ್‌ಗಾಗಿ ಗ್ರಾಹಕರು ನೋಂದಣಿ ಮಾಡಿಸುತ್ತಿದ್ದಾರೆ. ಎಲ್ಲರಿಗೂ ಸ್ಟಿಕರ್ ನೀಡಲು ಆಗುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಹೇಳಿದರೂ
ಸ್ಪಂದಿಸುತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.