ಭಾನುವಾರ, ಜೂನ್ 13, 2021
25 °C

ಸರ್ಕಾರಿ ಭೂಮಿ ಕಬಳಿಕೆ ಯತ್ನ: ಎಫ್‍ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ನಕಲಿ ದಾಖಲೆ ಸೃಷ್ಟಿಸಿ, ಸುಮಾರು ₹500 ಕೊಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿದ್ದ 28 ಆರೋಪಿಗಳ ವಿರುದ್ಧ ತಹಶೀಲ್ದಾರ್ ಎನ್.ರಘುಮೂರ್ತಿ ಅವರು ಸಂಪಿಗೇಹಳ್ಳಿ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

‘ಯಲಹಂಕ ತಾಲ್ಲೂಕು ಚೊಕ್ಕನ ಹಳ್ಳಿ ಗ್ರಾಮದ ಸರ್ವೇ ನಂ.77/4, 75/6ರಲ್ಲಿ 21 ಎಕರೆ 19 ಗುಂಟೆ ಜಾಗವು ಸರ್ಕಾರಿ ಗೋಮಾಳವಾಗಿದೆ. ಇದರಲ್ಲಿ 17 ಎಕರೆ 28 ಗುಂಟೆ ಜಾಗಕ್ಕೆ ಸಂಬಂಧಿಸಿ ರಾಜಾ ರೆಡ್ಡಿ, ಅಶ್ವತ್ಥ್‌ ವೈ, ಕಧೀರ್ ಲಕ್ಕಪ್ಪ, ಮುನಿರೆಡ್ಡಿ ಸೇರಿ ದಂತೆ 28 ಮಂದಿ ನಕಲಿ ದಾಖಲೆ ಸೃಷ್ಟಿಸಿ, ಖಾತೆ ಮಾಡಿಸಿ ಭೂಮಿ ಕಬಳಿಸಲು 10 ವರ್ಷಗಳಿಂದ ಪ್ರಯತ್ನಿಸುತ್ತಿದ್ದರು' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಜಮೀನು ಪಡೆಯಲು ಆರೋಪಿಗಳು ಸಲ್ಲಿಸಿದ್ದ ದಾಖಲೆಗಳು ನಕಲಿ ಎಂಬ ಸಂಶಯ ಬಂದ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸಿ, ದಾಖಲೆಗಳನ್ನು ಎಫ್‍ಎಸ್‍ಎಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ದಾಖಲೆಗಳು ನಕಲಿ ಎಂಬುದು ಪರಿಶೀಲನೆಯಿಂದ ಸಾಬೀತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿತ್ತು’ ಎಂದು ತಹಶೀಲ್ದಾರ್ ರಘುಮೂರ್ತಿ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು