ಬೆಂಗಳೂರು: ‘ನನ್ನ ಪತ್ನಿ ಮನೆಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ನನ್ನಿಂದಲೇ ಬಟ್ಟೆ ಒಗೆಸುತ್ತಾಳೆ, ಅಡುಗೆ ಮಾಡಿಸುತ್ತಾಳೆ. ಅದನ್ನು ಪ್ರಶ್ನಿಸಿದರೆ, ಆಕೆ ಹಾಗೂ ಆಕೆಯ ತಂದೆ– ತಾಯಿ ನನಗೇ ಬೆದರಿಕೆಯೊಡ್ಡುತ್ತಾರೆ’ ಎಂದು ವ್ಯಕ್ತಿಯೊಬ್ಬರು ನೀಡಿರುವ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಪತ್ನಿ ಹಾಗೂ ಅವರ ತಂದೆ–ತಾಯಿ ಕಿರುಕುಳದಿಂದ ಬೇಸತ್ತ ಪತಿ, ಮೂವರ ವಿರುದ್ಧವೂ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ’ ಎಂದು ಪೊಲೀಸರು ಹೇಳಿದರು.

ದೂರಿನ ವಿವರ: ‘2017ರ ಜೂನ್‌ನಲ್ಲಿ ಮದುವೆಯಾಗಿದ್ದು, ಕ್ಷುಲ್ಲಕ ಕಾರಣದಿಂದಾಗಿ 15 ದಿನಕ್ಕೇ ಪತ್ನಿ ತವರು ಮನೆಗೆ ಹೋಗಿದ್ದರು. ಬಳಿಕ, ಹಿರಿಯರೆಲ್ಲರೂ ಮಾತುಕತೆ ನಡೆಸಿ ಬುದ್ಧಿವಾದ ಹೇಳಿದ್ದರು. ಹಿರಿಯರ ಸಲಹೆಯಂತೆ ಫೆಬ್ರುವರಿಯಲ್ಲಿ ಬಾಡಿಗೆ ಮನೆ ಮಾಡಿ ಪತ್ನಿ ಜೊತೆ ಪ್ರತ್ಯೇಕವಾಗಿ ವಾಸವಿದ್ದೆ’ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.

‘ಪತ್ನಿ ಮನೆಗೆಲಸ ಮಾಡುತ್ತಿಲ್ಲ. ಎಲ್ಲವನ್ನೂ ನನ್ನಿಂದಲೇ ಮಾಡಿಸುತ್ತಿದ್ದಾಳೆ. ಮದುವೆಗೂ ಮುನ್ನವೇ ಆಕೆ, ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು ಗೊತ್ತಾಗಿದೆ. ಅವರಿಬ್ಬರ ಫೋಟೊವನ್ನೂ ನೋಡಿದ್ದೇನೆ. ಆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಪತ್ನಿಯು ನನಗೇ ಜೀವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.