ಭಾನುವಾರ, ಅಕ್ಟೋಬರ್ 24, 2021
20 °C

ಬೆಂಗಳೂರು: ಪೀಠೋಪಕರಣ ತಯಾರಿಕೆ‌ ಮಳಿಗೆಯಲ್ಲಿ ಬೆಂಕಿ ಅವಘಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ಮೈಸೂರು‌ ರಸ್ತೆಯಲ್ಲಿರುವ‌ ಪೀಠೋಪಕರಣ ತಯಾರಿಕೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣ ‌ಸುಟ್ಟಿವೆ.

ಬ್ಯಾಟರಾಯನಪುರದ ಟಿಂಬರ್ ಬಡಾವಣೆಯ 'ಲಕ್ಷ್ಮಿ‌ ಎಂಟರ್‌ಪ್ರೈಸಸ್' ಮಳಿಗೆಯಲ್ಲಿ ಶನಿವಾರ ತಡರಾತ್ರಿ ಈ‌ ಅವಘಡ ಸಂಭವಿಸಿದೆ. ಯಾವುದೇ‌ ಪ್ರಾಣಹಾನಿ‌ ಸಂಭವಿಸಿಲ್ಲ.

'ಮಳಿಗೆಯಲ್ಲಿ‌ ಸಣ್ಣದಾಗಿ‌ ಕಾಣಿಸಿಕೊಂಡಿದ್ದ ಬೆಂಕಿ ಕೆನ್ನಾಲಗೆ, ಕೆಲವೇ ನಿಮಿಷಗಳಲ್ಲಿ‌ ಧಗ ಧಗ ಉರಿಯಲಾರಂಭಿಸಿತ್ತು. ಇಡೀ ಮಳಿಗೆಯಲ್ಲಿದ್ದ ಹೊಸ ಪೀಠೋಪಕರಣಕ್ಕೆ‌ ಬೆಂಕಿ‌ ತಗುಲಿತು' ಎಂದು ಪೊಲೀಸರು ಹೇಳಿದರು.

'ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ‌ ಬಂದು ಮೂರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಸದ್ಯ ಮಳಿಗೆಯಲ್ಲಿರುವ ಅವಶೇಷಗಳನ್ನು‌ ತೆರವು ಮಾಡುವ‌ ಕೆಲಸ‌ ನಡೆದಿದೆ. ಬೆಂಕಿ‌ ಅವಘಡಕ್ಕೆ ಕಾರಣ ಗೊತ್ತಾಗಿಲ್ಲ' ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು