ಮಂಗಳವಾರ, ಅಕ್ಟೋಬರ್ 15, 2019
22 °C

ಬೌನ್ಸ್ ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳಿಂದ ಬೆಂಕಿ

Published:
Updated:

ಬೆಂಗಳೂರು: ಬೌನ್ಸ್ ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ, ಕಂಪನಿಯ ಮುಖ್ಯಸ್ಥ ಕಾರ್ತಿಕ್ ಎಂಬುವವರು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾರ್ವಜನಿಕರ ಉಪಯೋಗಕ್ಕೆಂದು ಬೌನ್ಸ್ ಸಂಸ್ಥೆ ದ್ವಿಚಕ್ರ ವಾಹನದ ಸೇವೆ ಒದಗಿಸುತ್ತಿದೆ. ಅ. 5ರಂದು ಬೆಳಗ್ಗಿನ ಜಾವ ಬಂಡೆಪಾಳ್ಯದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಬೌನ್ಸ್ ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಬೆಂಕಿಯ ತೀವ್ರತೆಗೆ ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ವಾಹನ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಕಂಪನಿಯ ಮುಖ್ಯಸ್ಥರು, ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬೌನ್ಸ್ ದ್ವಿಚಕ್ರ ವಾಹನ ಬಳಿಗೆ ದುಷ್ಕರ್ಮಿಗಳು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದರು.

Post Comments (+)