ಬೆಂಗಳೂರು: ನಗರದಲ್ಲಿ ಬ್ಯಾನರ್, ಫ್ಲೆಕ್ಸ್, ಕಟೌಟ್ ಅಳವಡಿಸುವವರು, ಅದರಲ್ಲಿರುವ ವ್ಯಕ್ತಿಗಳು, ಮುದ್ರಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ, ತೆರವಿನ ಸಂಪೂರ್ಣ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಲು ಅನುವಾಗುವ ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್ಒಪಿ) ಜಾರಿ ಮಾಡಲಾಗಿದೆ.

ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 158ರಂತೆ ಪಾಲಿಕೆಯ ವ್ಯಾಪ್ತಿಯಲ್ಲಿನ ಯಾವುದೇ ಕಟ್ಟಡ, ಭೂಮಿ, ರಚನೆ, ಗೋಡೆ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯ ಆಯುಕ್ತರ ಲಿಖಿತ ಅನುಮತಿಯಿಲ್ಲದೆ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಯಾವುದೇ ರೀತಿಯ ಜಾಹೀರಾತು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

ಮುಖ್ಯ ಆಯುಕ್ತರು ಲಿಖಿತ ಅನುಮತಿ ಸಲ್ಲಿಸದಿದ್ದರೆ, ಮುದ್ರಣ ಘಟಕದವರು ಯಾವುದೇ ರೀತಿಯ ಜಾಹೀರಾತುಗಳನ್ನು ಮುದ್ರಿಸಬಾರದು. ಕಾನೂನು ಉಲ್ಲಂಘಿಸಿ ಮುದ್ರಿಸಿದರೆ ಅವರ ಪರವಾನಗಿ ರದ್ದುಗೊಳಿಸುವ ಜೊತೆಗೆ ಕ್ರಿಮಿನಲ್ ಮೊಕದ್ದಮೆ ಹಾಕಲು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನಿತರೆ ಜಾಹೀರಾತುಗಳನ್ನು ತೆರವು ಮಾಡುವ ವೆಚ್ಚವನ್ನು ಆಸ್ತಿ ತೆರಿಗೆ ಸಂಗ್ರಹಿಸುವ ಮಾದರಿಯಲ್ಲಿ ಬಡ್ಡಿ ಮತ್ತು ದಂಡಗಳೊಂದಿಗೆ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ದಂಡವನ್ನು ಪಾವತಿಸದಿದ್ದರೆ, ಆಸ್ತಿ ತೆರಿಗೆಯಲ್ಲಿ ಅದನ್ನು ಸೇರಿಸಿ ವಸೂಲಿ ಮಾಡಬೇಕು. ಪೊಲೀಸರು ಸಂಪೂರ್ಣ ಸಹಕಾರ ನೀಡಿ, ತ್ವರಿತವಾಗಿ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು.

ಎಸ್ಒಪಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ವಲಯದ ಜಂಟಿ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ಹಾಗೂ ವಲಯ ಆಯುಕ್ತರನ್ನು ಮೇಲ್ವಿಚಾರಣೆ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ವಲಯ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆ ನಡೆಸಬೇಕು.

ಪೊಲೀಸ್ ಕಮಿಷನರ್ ಅವರು ಎಸ್ಒಪಿಯನ್ನು ಪಾಲಿಕೆಯ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬೆಂಗಳೂರು ನಗರಕ್ಕೆ ಒಬ್ಬರು ನೋಡಲ್ ಅಧಿಕಾರಿ ಮತ್ತು ಪೊಲೀಸ್ ಠಾಣೆವಾರು ನೋಡಲ್ ಅಧಿಕಾರಿಯನ್ನು ನೇಮಿಸಿ ಅವರ ಹೆಸರು, ಹುದ್ದೆ ಮತ್ತು ಮೊಬೈಲ್ ವಿವರಗಳನ್ನೊಳಗೊಂಡ ಲಿಖಿತ ಆದೇಶ ಹೊರಡಿಸಬೇಕು.

ಬಿಬಿಎಂಪಿ ಜಾಹೀರಾತು ವಿಭಾಗದ ವಿಶೇಷ ಆಯುಕ್ತರಿಗೆ ನೆರವಿಗೆ ಜಾಹೀರಾತಿನ ಉಪ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಪೊಲೀಸ್ ಕಮಿಷನರ್ ಅವರು ಎಸ್ಒಪಿ ಅನುಷ್ಠಾನದ ಬಗ್ಗೆ ನಿಯಮಿತವಾಗಿ ಪರಿಶೀಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಾಹೀರಾತು ನಿಯಂತ್ರಣ ತಂಡ

ಮಾರ್ಷಲ್ ಮತ್ತು ಪ್ರಹರಿಯವರ ಸಹಯೋಗದಲ್ಲಿ ಕಿರಿಯ/ ಸಹಾಯಕ/ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳನ್ನು ಒಳಗೊಂಡ ಜಾಹೀರಾತು ನಿಯಂತ್ರಣ ತಂಡವನ್ನು ವಲಯವಾರು ವಲಯ ಆಯುಕ್ತರು ರಚಿಸಬೇಕು. ಫ್ಲೆಕ್ಸ್ ಬ್ಯಾನರ್ಗಳ ವಿರುದ್ಧ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಅವರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬೇಕು. ಫ್ಲೆಕ್ಸ್ ಬ್ಯಾನರ್ ಪ್ರದರ್ಶನದ ಬಗ್ಗೆ ದೂರು ಸ್ವೀಕರಿಸಲು ಎಇಇ ಅವರು ನಿಯಂತ್ರಣ ಕೊಠಡಿ ಸ್ಥಾಪಿಸಿ ದೂರವಾಣಿ ಸಂಖ್ಯೆಯನ್ನು ಪೊಲೀಸ್ ಠಾಣೆಗೆ ನೀಡಬೇಕು. 1533 ಮತ್ತು ಸಹಾಯ ಆ್ಯಪ್ನಲ್ಲಿ ಬಂದಂತಹ ದೂರುಗಳನ್ನೂ ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.

ಪೊಲೀಸರೊಂದಿಗೆ ಸಮನ್ವಯ

* ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡಗಳು 24/7 ಕಾರ್ಯನಿರ್ವಹಿಸಬೇಕು. ಈ ತಂಡದ ಒಬ್ಬರು ಎಲ್ಲ ಸಮಯದಲ್ಲೂ ಪೊಲೀಸ್ ಠಾಣೆಯಲ್ಲಿ ಹಾಜರಿರಬೇಕು

* ಕಾರ್ಯನಿರ್ವಾಹಕರ ಹೆಸರು ಹುದ್ದೆ ಮೊಬೈಲ್ ಮತ್ತು ನಿಯಂತ್ರಣ ಕೊಠಡಿ ಸಂಖ್ಯೆಯ ವಿವರಗಳ ಜಾಹೀರಾತು ನಿಯಂತ್ರಣ ತಂಡದ ಪಟ್ಟಿಯನ್ನು ಪ್ರತಿ ಪೊಲೀಸ್ ಠಾಣೆಗೆ ನೀಡಬೇಕು ಹಾಗೂ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಬೇಕು

* ಪ್ರತಿ ಪೊಲೀಸ್ ಠಾಣೆಗೆ ಒಬ್ಬರನ್ನು ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಆಯಾ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳ ವಿವರ ನೀಡಬೇಕು

* ಹೊಯ್ಸಳ ಮತ್ತು ಇತರೆ ಪೊಲೀಸ್ ಗಸ್ತು ಸಿಬ್ಬಂದಿ ಗಸ್ತು ಸಮಯದಲ್ಲಿ ಯಾವುದಾದರೂ ಫ್ಲೆಕ್ಸ್ ಬ್ಯಾನರ್ ಕಟೌಟ್ ಹಾಗೂ ಇನ್ನಿತರೆ ಜಾಹೀರಾತು ಅಳವಡಿಸಿರುವುದು ಅಳವಡಿಸುತ್ತಿರುವುದು ಕಂಡುಬಂದಲ್ಲಿ ಅಂಥವರನ್ನು ಕಾನೂನಿನ ಪ್ರಕಾರ ಸ್ಥಳದಲ್ಲೇ ಬಂಧಿಸಬೇಕು ಹಾಗೂ ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡಕ್ಕೆ ಮಾಹಿತಿ ನೀಡಬೇಕು

* ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡ ಬ್ಯಾನರ್ ಕಟೌಟ್ ತೆರವುಗೊಳಿಸಿ ಎಫ್ಐಆರ್ ದಾಖಲಿಸಬೇಕು

* ಪ್ರಥಮ ವರ್ತಮಾನ ವರದಿಯಲ್ಲಿ ಜಾಹೀರಾತುಗಳನ್ನು ಅಳವಡಿಸಿದವರು ಹಾಗೂ ಅವುಗಳಲ್ಲಿರುವ ವ್ಯಕ್ತಿಗಳ ಹೆಸರು ದಾಖಲಿಸಬೇಕು

* ಪೊಲೀಸರು ಎಫ್ಐಆರ್ ದಾಖಲಿಸಿ ಬಂಧನ ಸೇರಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು.

* ಫ್ಲೆಕ್ಸ್ ಬ್ಯಾನರ್ ಕಟೌಟ್ ಹಾಗೂ ಇನ್ನಿತರೆ ಜಾಹೀರಾತುಗಳನ್ನು ಮುದ್ರಿಸಿದ ಮುದ್ರಕರ ವಿರುದ್ಧ ಪ್ರಚೋದನೆ ಹಾಗೂ ಸಹ-ಸಂಚುಕೊರರೆಂದು ಪರಿಗಣಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು

* ಎಫ್ಐಆರ್ನಲ್ಲಿ ಬಿಬಿಎಂಪಿ ಕಾಯ್ದೆ 2020 (ಸೆಕ್ಷನ್ 254 326) ಕರ್ನಾಟಕ ಮುಕ್ತ ಸ್ಥಳಗಳು (ವಿರೂಪಗೊಳಿಸುವಿಕೆ ತಡೆಗಟ್ಟುವಿಕೆ) ಕಾಯ್ದೆ 1981 ಭಾರತೀಯ ನ್ಯಾಯ ಸಂಹಿತಾ ಆಸ್ತಿ ನಾಶ ಮತ್ತು ನಷ್ಟ ತಡೆಗಟ್ಟುವಿಕೆ ಕಾಯ್ದೆ 1981 ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆ 1984 ಯಾವುದೇ ಇತರ ಅನ್ವಯವಾಗುವ ಕಾನೂನುಗಳನ್ನು ನಮೂದಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.