ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್ಎಂಸಿಜಿ ಬ್ರ್ಯಾಂಡ್ ರ‍್ಯಾಂಕಿಂಗ್‌ನಲ್ಲಿ ’ನಂದಿನಿ’ಗೆ ಆರನೇ ಸ್ಥಾನ

Published 3 ಆಗಸ್ಟ್ 2023, 0:09 IST
Last Updated 3 ಆಗಸ್ಟ್ 2023, 0:09 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲೇ ’ನಂದಿನಿ’ ಉತ್ಪನ್ನಗಳು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಬ್ರ್ಯಾಂಡ್‌ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನ ಪಡೆದಿದೆ.

ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳದ (ಕೆಎಂಎಫ್) ‘ನಂದಿನಿ’ ದೇಶದ ಬಳಕೆದಾರ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಈ ಬಾರಿ ಒಂದು ಸ್ಥಾನ ಮೇಲಕ್ಕೇರಿದೆ.

ಮಾರುಕಟ್ಟೆ ಸಂಶೋಧನಾ ಕಂಪನಿ ‘ಕಾಂಟರ್’  ಬಿಡುಗಡೆ ಮಾಡಿರುವ 2023ನೇ ಸಾಲಿನ ಬ್ರ್ಯಾಂಡ್ ಫ್ರೂಟ್‌ ವರದಿಯಲ್ಲಿ ಈ ವಿವರ ನೀಡಲಾಗಿದೆ.

ಡೇರಿ ಉತ್ಪನ್ನಗಳ ಪಟ್ಟಿಯಲ್ಲಿ ‘ಅಮೂಲ್‌’ ಹೊರತುಪ‍ಡಿಸಿದರೆ ನಂದಿನಿ ಮಾತ್ರ ಸ್ಥಾನ ಪಡೆದಿದೆ.

ಪಾರ್ಲೆ ಪ್ರಥಮ ಸ್ಥಾನ, ಬ್ರಿಟಾನಿಯಾ ಎರಡನೇ ಸ್ಥಾನ, ಅಮೂಲ್‌ ಮೂರನೇ ಸ್ಥಾನ, ಕ್ಲಿನಿಕ್‌ ಪ್ಲಸ್‌ ನಾಲ್ಕನೇ ಸ್ಥಾನ ಹಾಗೂ ಟಾಟಾ ಐದನೇ ಸ್ಥಾನಗಳನ್ನು ಪಡೆದಿವೆ.

2021ರ ನವೆಂಬರ್‌ನಿಂದ 2022ರ ಅಕ್ಟೋಬರ್‌ ಅವಧಿಯಲ್ಲಿನ ಮಾಹಿತಿ ಸಂಗ್ರಹಿಸಿ ಈ ರ‍್ಯಾಂಕಿಂಗ್‌ಗಳನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT