ಬೆಂಗಳೂರು: ಪ್ರಸಕ್ತ ವರ್ಷದ ‘ಆಶ್ವಾಸನ’ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಎಲೆಮರೆಯ ಕಾಯಿಯಂತೆ ಇರುವವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ದಾಂಡೇಲಿಯ ಉಸ್ತಾದ್ ಕಾಸಿಂ ಜಮಾದಾರ್, ಯಕ್ಷಗಾನಕ್ಕಾಗಿ ಶಿವಮೊಗ್ಗದ ನಿಟ್ಟೂರಿನ ಸಂತೆಗುಳಿ ನಾರಾಯಣ ಭಟ್ಟ, ಚಿತ್ರಕಲೆ ಮತ್ತು ನಾಟಕಕ್ಕಾಗಿಉತ್ತರ ಕನ್ನಡ ಜಿಲ್ಲೆಯ ಕೆಕ್ಕಾರಿನ ಜಿ.ಡಿ.ಭಟ್ಟ,
ಕರಕುಶಲ ಕಲೆಗಾಗಿ ನವಲಗುಂದದ ರಹಮತ್ತಾಭೀಕುತುಬುಬ್ಬಿನ್ ಪಾವಟೆಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರಿಗೆ ಸ್ಮರಣಿಕೆ ಹಾಗೂ ₹15 ಸಾವಿರ ನೀಡಿ ಗೌರವಿಸಲಾಗುವುದು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಿ.ಎಸ್. ಹೆಗಡೆ ತಿಳಿಸಿದ್ದಾರೆ.

ಘರಾಣಾದ ಪ್ರಸಿದ್ಧ ಗಾಯಕಿ ಲಲಿತಾ ಶಿವರಾಮ ಉಭಯಕರ್ ಅವರು1993ರಲ್ಲಿ ‘ಆಶ್ವಾಸನ ಫೌಂಡೇಷನ್’ ಸ್ಥಾಪಿಸಿದ್ದರು.

ಇದೇ 15ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದುಅಧ್ಯಕ್ಷೆ ಮಾಲವಿಕಾ ಬಿಜೂರ ಉಭಯಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.