ಭಾನುವಾರ, ಜೂನ್ 13, 2021
29 °C

ಆಮ್ಲಜನಕ ಸಾಧನ ಹೆಸರಿನಲ್ಲಿ ₹ 12.59 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಮ್ಲಜನಕ ಸಾಂದ್ರೀ ಕರಣ ಸಾಧನಗಳನ್ನು ಮಾರಾಟ ಮಾಡುವುದಾಗಿ ಹೇಳಿ ನಗರದ ಉದ್ಯಮಿಯೊಬ್ಬರಿಂದ ₹ 12.59 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಉತ್ತರ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಭೂಪಸಂದ್ರದ ನಿವಾಸಿಯಾಗಿರುವ ಉದ್ಯಮಿ ದೂರು ನೀಡಿದ್ದಾರೆ. ಸುರಭಿ ಎಂಟರ್‌ಪ್ರೈಸಸ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆಮ್ಲಜನಕ ಸಾಂದ್ರೀಕರಣ ಸಾಧನಗಳಿಗಾಗಿ ದೂರುದಾರ ಹುಡುಕಾಟ ನಡೆಸುತ್ತಿದ್ದರು. ಸುರಭಿ ಎಂಟರ್‌ಪ್ರೈಸಸ್ ಕಂಪನಿಯೊಂದರ ಜಾಹೀರಾತು ನೋಡಿ  ಪ್ರತಿನಿಧಿಯನ್ನು ಸಂಪರ್ಕಿಸಿದ್ದರು. ಅಗತ್ಯವಿರುವಷ್ಟು ಸಾಧನ ನೀಡಲು ಒಪ್ಪಿದ್ದ ಪ್ರತಿನಿಧಿ, ಹಂತಹಂತವಾಗಿ ₹ 12.59 ಲಕ್ಷ ಪಡೆದಿದ್ದ’ ಎಂದು ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು