ಬೆಂಗಳೂರು: ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ‘ಗೃಹ ಆರೋಗ್ಯ’ ಯೋಜನೆಯಡಿ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಒಳಗೊಂಡ ಔಷಧ ಪೆಟ್ಟಿಗೆ ವಿತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ ನಾಲ್ಕು ವಿಭಾಗಗಳಿಂದ 8 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ತಲಾ 90 ಮಾತ್ರೆಗಳನ್ನು ಒಳಗೊಂಡ ಮಾದರಿ ಔಷಧ ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗಿದೆ. ಮನೆ ಮನೆ ಆರೋಗ್ಯ ತಪಾಸಣೆ ವೇಳೆ ಸಮಸ್ಯೆ ದೃಢಪಟ್ಟಲ್ಲಿ ಹಾಗೂ ಈಗಾಗಲೇ ಸಮಸ್ಯೆ ಎದುರಿಸುತ್ತಿರುವವರಿಗೆ ಈ ಪೆಟ್ಟಿಗೆಗಳನ್ನು ಉಚಿತವಾಗಿ ವಿತರಿಸಲಾಗುವುದು.

ಮೊದಲ ಬಾರಿಗೆ ನೀಡಿದ ಮಾತ್ರೆಗಳು ಖಾಲಿಯಾದ ಬಳಿಕ ಮತ್ತೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ತಲುಪಿಸಲಾಗುತ್ತದೆ. 30 ವರ್ಷ ಮೇಲ್ಪಟ್ಟವರು ಈ ಮಾತ್ರೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ತಲಾ ಮೂರು ಮಾದರಿಯ ಮಾತ್ರೆಗಳನ್ನು ಸರ್ಕಾರ ಗುರುತಿಸಿದೆ. ಆ ಮಾತ್ರೆಗಳನ್ನು ಮಾತ್ರ ನೀಡಲಾಗುವುದು.

₹64 ಕೋಟಿ ಮೊತ್ತದ ಔಷಧ ಖರೀದಿ ಸೇರಿ ಒಟ್ಟು ₹82 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಿಂದ ಔಷಧ ಖರೀದಿಸಿ, ವಿತರಿಸಲಾಗುವುದು. ಔಷಧ ಪಡೆದ ವ್ಯಕ್ತಿಯ ಹೆಸರು ಹಾಗೂ ವಿವರವನ್ನು ಪೆಟ್ಟಿಗೆಯ ಮೇಲೆ ನಮೂದಿಸಲಾಗುತ್ತದೆ. ಅದೇ ರೀತಿ, ಅವರ ಆರೋಗ್ಯ ಸ್ಥಿತಿಗತಿಯ ಮಾಹಿತಿ, ಔಷಧ ವಿತರಿಸಿದ ವಿವರವನ್ನು ಇಲಾಖೆಯೂ ದಾಖಲಿಸಿಕೊಳ್ಳಲಿದೆ.

ತಪಾಸಣಾ ತಂಡವು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ತಲಾ 20 ಮನೆಗಳಿಗೆ ಭೇಟಿ ನೀಡಲಿದೆ. ಮನೆ ಮನೆ ಭೇಟಿ ವೇಳೆ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಪತ್ತೆಗೂ ತಪಾಸಣೆ ನಡೆಸಲಾಗುವುದು. ಕ್ಯಾನ್ಸರ್ ದೃಢಪಟ್ಟಲ್ಲಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಭೇಟಿ ಸಂದರ್ಭದಲ್ಲಿ ಮನೆಯ ಸದಸ್ಯರು ಇರದಿದ್ದಲ್ಲಿ ತಂಡವು ಮರುದಿನ ಮತ್ತೆ ಭೇಟಿ ನೀಡಲಿದೆ.

ತಪಾಸಣೆ ಬಗ್ಗೆ ತರಬೇತಿ: ಮನೆ ಮನೆ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ), ಜಿಲ್ಲಾ ಕಣ್ಗಾವಲು ಅಧಿಕಾರಿಗಳಿಗೆ (ಡಿಎಸ್‌ಒ) ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತದೆ. ಇವರು ಜಿಲ್ಲೆಗಳಲ್ಲಿ ಸಭೆ ನಡೆಸಿ, ವೈದ್ಯಾಧಿಕಾರಿಗಳಿಗೆ ತರಬೇತಿ ಕೊಡಬೇಕಾಗುತ್ತದೆ. ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಡಿ ಮುಖ್ಯ ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರಿಗೆ ತರಬೇತಿ ನೀಡುತ್ತಾರೆ.

‘ಔಷಧ ಖರೀದಿಗೆ ಸರ್ಕಾರದಿಂದ ಅನುಮೋದನೆ ದೊರೆತ ಬಳಿಕ, ತಪಾಸಣೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ನಂತರ ಔಷಧ ಪೆಟ್ಟಿಗೆಯೊಂದಿಗೆ ತಂಡವು ಮನೆ ಮನೆಗೆ ಭೇಟಿ ನೀಡಲಿದೆ. ಪ್ರಾರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡುವುದರಿಂದ ಮುಂದಾಗುವ ಅಪಾಯ ತಡೆಯಲು ಸಾಧ್ಯ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಗೃಹ ಆರೋಗ್ಯ ಯೋಜನೆಯಡಿ ಉಚಿತವಾಗಿ ಔಷಧಗಳನ್ನು ಒದಗಿಸಲಾಗುತ್ತದೆ. ಈ ವರ್ಷ ಎಂಟು ಜಿಲ್ಲೆಗಳಲ್ಲಿ ಪ್ರಾರಂಭಿಸಿ ಮುಂದಿನ ವರ್ಷ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ಮನೆಗಳಿಗೆ ಸ್ಟಿಕರ್

ಯೋಜನೆಯಡಿ ಮನೆಗಳಿಗೆ ಭೇಟಿ ನೀಡುವ ತಪಾಸಣಾ ತಂಡಗಳು ಭೇಟಿ ದೃಢಪಡಿಸಲು ಮನೆಗಳಿಗೆ ಸ್ಟಿಕರ್‌ಗಳನ್ನು ಅಂಟಿಸಲಿವೆ. ಈಗಾಗಲೇ ಮಾದರಿ ಸ್ಟಿಕರ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಸ್ಟಿಕರ್‌ನಲ್ಲಿ ಜಾಗೃತಿ ಸಂದೇಶ ಯೋಜನೆಯ ಬಗ್ಗೆ ವಿವರ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಭಾವಚಿತ್ರ ಇರಲಿವೆ.

ಯಾವೆಲ್ಲ ಜಿಲ್ಲೆಗಳಲ್ಲಿ ಜಾರಿ?

ರಾಮನಗರ ತುಮಕೂರು ಬೆಳಗಾವಿ ಗದಗ ಬಳ್ಳಾರಿ ಯಾದಗಿರಿ ದಕ್ಷಿಣ ಕನ್ನಡ ಮೈಸೂರು ಸರ್ಕಾರ ನಿಗದಿಪಡಿಸಿದ ಮಾತ್ರೆ ಅಧಿಕ ರಕ್ತದೊತ್ತಡಕ್ಕೆ: ಎಮ್ಲೋಡಿಪೈನ್ 5 ಎಂಜಿ ಟೆಲ್ಮಿಸಾರ್ಟನ್ 40 ಎಂಜಿ ಕ್ಲೋರ್ತಲಿಡೋನ್ 12.5 ಎಂಜಿ ಮಧುಮೇಹಕ್ಕೆ: ಮೆಟ್‌ಫಾರ್ಮಿನ್ ಎಸ್‌ಆರ್ 500 ಎಂಜಿ ಮೆಟ್‌ಫಾರ್ಮಿನ್ ಎಸ್‌ಆರ್ 100 ಎಂಜಿ ಗ್ಲಿಮಿಪ್ರೈಡ್ 1 ಎಂಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.