ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

300 ಕಂಪನಿಗಳ ಭವಿಷ್ಯ ಅತಂತ್ರ

ಸೌರಚಾವಣಿ: ವಾಣಿಜ್ಯ ಉದ್ದೇಶದ ಬಂಡವಾಳ ಹೂಡಿಕೆಗೆ ಕೆಇಆರ್‌ಸಿ ನಿರ್ಬಂಧ
Last Updated 14 ಡಿಸೆಂಬರ್ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ‘ಸೌರಚಾವಣಿ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಸಂಬಂಧಿಸಿದ ಮಾನದಂಡಗಳನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಪರಿಷ್ಕರಿಸಿದ ಪರಿಣಾಮಸೌರವಿದ್ಯುತ್ ಉತ್ಪಾದನೆಯಲ್ಲಿ ಹಿನ್ನಡೆಯಾಗಲಿದೆ’ ಎಂದುಕರ್ನಾಟಕ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು ಮತ್ತು ತಯಾರಕರ ಸಂಘದ (ಕೆಆರ್‌ಇಎಸ್‌ಎಂಎ) ಅಧ್ಯಕ್ಷ ರಮೇಶ್ ಶಿವಣ್ಣ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ2021ರ ವೇಳೆಗೆ ಸೌರಚಾವಣಿ ಗಳಿಂದ 2,400 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯ ಗುರಿ ನಿಗದಿ ಪಡಿಸಿದೆ.ಆದರೆ, 2019ರ ಜುಲೈ ವೇಳೆಗೆ 205 ಮೆಗಾವಾಟ್‌ ಮಾತ್ರ ಉತ್ಪಾದನೆಯಾಗಿದೆ. ಈಗವಾಣಿಜ್ಯ ಉದ್ದೇಶಕ್ಕೆ ಸೌರವಿದ್ಯುತ್‌ ಘಟಕಗಳ ಮೇಲೆ ಬಂಡವಾಳ ಹೂಡುವ ಅವಕಾಶ ವನ್ನುಕೆಇಆರ್‌ಸಿ ತೆಗೆದು ಹಾಕಿದೆ. ಇದರಿಂದ 300 ಕಂಪನಿಗಳ ಭವಿಷ್ಯ ಅತಂತ್ರವಾಗಿದೆ ಎಂದರು.

‘ಹೊಸ ಮಾರ್ಗದರ್ಶಿ ಸೂತ್ರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ಬಳಕೆಯಲ್ಲಿ ಯುನಿಟ್‌ಗೆ ₹ 3.07 ಮಾತ್ರ ನಿಗದಿಪಡಿಸ
ಲಾಗಿದೆ.ಒಂದು ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಸೌರಘಟಕವನ್ನು ನೆಲದಲ್ಲಿ ಅಳವಡಿಸಲು ₹ 3.5 ಕೋಟಿ ಬೇಕಾಗುತ್ತದೆ. ಇಷ್ಟೇ ಸಾಮರ್ಥ್ಯದ ಘಟಕವನ್ನು ಮನೆಯ ಮೇಲೆ ಅಳವಡಿಸಲು ₹ 4.5 ಕೋಟಿ ಬೇಕಾಗುತ್ತದೆ. ಈಗ ₹ 3.07 ದರ ನಿಗದಿಪಡಿಸಿರುವುದರಿಂದ ಹೂಡಿಕೆದಾರರಿಗೂ ಲಾಭವಿಲ್ಲ, ಕಟ್ಟಡದ ಮಾಲೀಕರಿಗೂ ಲಾಭವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT