‘ಕನಿಷ್ಠ ವಾರಕ್ಕೊಮ್ಮೆ ಸಂತೆ ನಡೆಸಬೇಕೆಂದು ಗ್ರಾಹಕರ ಒತ್ತಾಯವಿದೆ. ತಿಂಗಳಿಗೆ ಎರಡು ಬಾರಿ ಸಂತೆ ಆಯೋಜಿಸಲು ರೈತ ಸಂಘ ತೀರ್ಮಾನಿಸಿದೆ. ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ- ಭಾನುವಾರ ಸಂತೆ ಆಯೋಜಿಸಲಾಗುತ್ತದೆ. ಈ ಸಂತೆಯಲ್ಲಿ ಆರ್.ಆರ್.ನಗರದ ಗ್ರಾಹಕ ಪ್ರತಿನಿಧಿಗಳು ಮತ್ತು ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಲಿದ್ದು ಈ ಸಮಿತಿಯೇ ಮುಂದೆ ಸಂತೆ ಆಯೋಜನೆಯ ಜವಾಬ್ದಾರಿ ನಿರ್ವಹಿಸಲಿದೆ‘ ಎಂದು ಸಂಘಟಕರು ತಿಳಿಸಿದ್ದಾರೆ.26ರಂದು ರಂಗಪ್ರಯೋಗ ರೈತ ಸಂತೆಗೆ ಮತ್ತಷ್ಟು ಬಲ ತುಂಬಲು ನಟಿ ಅಕ್ಷತಾ ಪಾಂಡವಪುರ 26ರಂದು ಸಂಜೆ 6.30ಕ್ಕೆ ‘ಅಡುಗೆ ಮಾತು’ ಎಂಬ ಆಪ್ತರಂಗ ಪ್ರಯೋಗ ನಡೆಯಲಿದೆ.