ಭಾನುವಾರ, ಅಕ್ಟೋಬರ್ 25, 2020
27 °C
ಹಸಿರು ಮಾರ್ಗದಲ್ಲಿ ಶನಿವಾರ–ಭಾನುವಾರ ಭಾಗಶಃ ರೈಲು ಸಂಚಾರ

ಹಸಿರು ಮಾರ್ಗ: ಎರಡು ದಿನ ತಾಸಿಗೂ ಮೊದಲು ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ನಮ್ಮ ಮೆಟ್ರೊ' ಹಸಿರು ಮಾರ್ಗದ ಆರ್.ವಿ. ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ‌ ನಿಲ್ದಾಣದವರೆಗೆ ಇದೇ ಶನಿವಾರ ಮತ್ತು ಭಾನುವಾರದಂದು ಒಂದು ತಾಸು ಮೊದಲೇ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ಎರಡನೇ ಹಂತದಲ್ಲಿನ ಯಲಚೇನಹಳ್ಳಿ- ಅಂಜನಾಪುರ ವಿಸ್ತರಿಸಿದ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ
ಎಂದು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ ಹೇಳಿದೆ. ಈ ನಿಲ್ದಾಣಗಳ ನಡುವೆ ಶನಿವಾರ- ಭಾನುವಾರ ರಾತ್ರಿ 8 ಗಂಟೆಗೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ವಿಸ್ತರಿತ ಮಾರ್ಗದಲ್ಲಿ ಸಿಸ್ಟಂ ಮತ್ತು ರೈಲುಗಳ ಪರೀಕ್ಷೆಯನ್ನು ಈ ಅವಧಿಯಲ್ಲಿ ನಡೆಸಲಾಗುತ್ತದೆ. 

ನೇರಳೆ ಮಾರ್ಗದಲ್ಲಿನ ಪ್ರಯಾಣಿಕರು ಯಲಚೇನಹಳ್ಳಿ ನಿಲ್ದಾಣದ ಕಡೆಗೆ, ಮೆಜೆಸ್ಟಿಕ್‌ನಲ್ಲಿ ಹಸಿರು ಮಾರ್ಗದಲ್ಲಿ ರೈಲು ಬದಲಾಯಿಸಿ ಪ್ರಯಾಣಿಸಲು, ಬೈಯಪ್ಪನಹಳ್ಳಿ ನಿಲ್ದಾಣದಿಂದ ಸಂಜೆ 6.55ಕ್ಕೆ ಮತ್ತು ಮೈಸೂರು ರಸ್ತೆ ನಿಲ್ದಾಣದಿಂದ ಸಂಜೆ 7ಕ್ಕೆ ಹೊರಡುವ ರೈಲುಗಳಲ್ಲಿ ಪ್ರಯಾಣಿಸಬೇಕು. ನಂತರ ಪ್ರಯಾಣಿಸಿದರೆ, ಆರ್.ವಿ. ರಸ್ತೆ ನಿಲ್ದಾಣದವರೆಗೆ ಮಾತ್ರ ತಲುಪಬಹುದಾಗಿದೆ ಎಂದು ನಿಗಮ ಪ್ರಕಟಣೆಯಲ್ಲಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು