‘ಗೊತ್ತಾಗದೇ ಆನ್ ಮಾಡಿದ್ದಾರೆ’
‘ರಾಯ್ ಸೂಚನೆ ಮೇರೆಗೆ ಡಿಜಿಟಲ್ ಬೋರ್ಡ್ ಬಳಸದಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದೆ. ಸಿಬ್ಬಂದಿಗೆ ಗೊತ್ತಾಗದೇ ಬೋರ್ಡ್ ಆನ್ ಮಾಡಿದ್ದರು. ಪರಿಚಯಸ್ಥರೊಬ್ಬರು ಈ ವಿಚಾರ ತಿಳಿಸಿದ್ದರಿಂದ ತಕ್ಷಣವೇ ಬೋರ್ಡ್ ಆಫ್ ಮಾಡಿಸಿದ್ದೆ ಎಂಬುದಾಗಿ ವ್ಯವಸ್ಥಾಪಕ ಸರ್ಫರಾಜ್ ಹೇಳಿಕೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.