ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಕರು, ಬ್ರಾಹ್ಮಣರು ಒಗ್ಗೂಡಲಿ: ಎಸ್. ಗುರುಮೂರ್ತಿ ಅಭಿಮತ

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ
Last Updated 5 ಏಪ್ರಿಲ್ 2021, 22:35 IST
ಅಕ್ಷರ ಗಾತ್ರ

ಬೆಂಗಳೂರು: ‘ಪ‍್ರಸ್ತುತ ಪರಿಸ್ಥಿತಿಯಲ್ಲಿ ಹವ್ಯಕರು ಹಾಗೂ ಬ್ರಾಹ್ಮಣರು ಒಗ್ಗೂಡುವುದು ಅನಿವಾರ್ಯ’ ಎಂದು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್‌.ಗುರುಮೂರ್ತಿ ಅಭಿಪ್ರಾಯ ಪಟ್ಟರು.

ಅಖಿಲ ಹವ್ಯಕ ಮಹಾಸಭಾ ಭಾನುವಾರ ಆಯೋಜಿಸಿದ್ದ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ ಹಾಗೂ ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೇರೆಯವರನ್ನು ದ್ವೇಷಿಸುವ ಸಮಾಜ ನಮ್ಮದಲ್ಲ. ನಾವು ಇತರ ಸಮುದಾಯಗಳಿಗೆ ಮಾರ್ಗದರ್ಶನ ಮಾಡುವವರು. ಸಮುದಾಯದ ಹಿತ ಹಾಗೂ ನಮ್ಮ ತನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಹವ್ಯಕರು ಮತ್ತು ಬ್ರಾಹ್ಮಣರು ಒಟ್ಟಾಗಬೇಕಿದೆ’ ಎಂದರು.

‘ಹವ್ಯಕರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ. ಸಮಾಜಕ್ಕೆ ವಿಶಿಷ್ಠ ಕೊಡುಗೆಗಳನ್ನು ನೀಡುತ್ತಿದ್ದಾರೆ. ಹವ್ಯಕರು ಮೂಲತಃ ಕೃಷಿಕರಾದರು ಕೂಡ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪ್ರಾಮಾಣಿಕ ವಾಗಿ ಕೆಲಸ ಮಾಡಿ ಸಮಾಜದಲ್ಲಿ ಗೌರವಯುತವಾದ ಬದುಕು ಸಾಗಿಸುತ್ತಿದ್ದಾರೆ. ದಿವಂಗತ ರಾಮಕೃಷ್ಣ ಹೆಗಡೆ, ದತ್ತಾತ್ರೇಯ ಹೊಸಬಾಳೆ, ವಿಶ್ವೇಶ್ವರ ಹೆಗಡೆ ಕಾಗೇರಿ ಹೀಗೆ ಅನೇಕರ ಸಾಧನೆ ನಮಗೆ ಪ್ರೇರಣೆ. ಅವರು ನಮಗೆ ದಾರಿ ದೀಪವಾಗಿದ್ದಾರೆ’ ಎಂದು ತಿಳಿಸಿದರು.

ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ‘ವಿಶ್ವದಲ್ಲಿ ಒಟ್ಟು 4 ಲಕ್ಷ ಮಂದಿ ಹವ್ಯಕರಿದ್ದಾರೆ. ಈ ಪೈಕಿ ಯಾರೂ ಶಿಕ್ಷಣದಿಂದ ವಂಚಿತರಾಗಿಲ್ಲ. ಹೀಗಾಗಿ ನಮ್ಮಲ್ಲಿ ಪ್ರತಿಭಾನ್ವಿತರ ದೊಡ್ಡ ದಂಡೇ ಇದೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದರಿಂದ ಉಳಿದವರಿಗೂ ಸ್ಫೂರ್ತಿ ಬರುತ್ತದೆ. ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಲು ಇದರಿಂದ ಅನುಕೂಲವಾಗುತ್ತದೆ’ ಎಂದರು.

‘ಈ ಪ್ರಶಸ್ತಿ ನಮಗೆ ಸಲ್ಲಬೇಕಾ ದದ್ದಲ್ಲ. ಇದು ಪರಂಪರೆಗೆ ಕೊಟ್ಟ ಗೌರವ. ಈ ಪರಂಪರೆ ಹೀಗೆ ಮುಂದುವರಿಯಬೇಕು’ ಎಂದು 2020ನೇ ಸಾಲಿನ ಹವ್ಯಕ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್‌ ಬಂದಗದ್ದೆ ನಾಗರಾಜ ಹೇಳಿದರು.

2020ನೇ ಸಾಲಿನ ಹವ್ಯಕ ಭೂಷಣ ಪ್ರಶಸ್ತಿ ಪಡೆದ ಡಾ.ಶ್ಯಾಮ್‌ ಸಿ.ಭಟ್‌ ‘ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಇನ್ನಷ್ಟು ಸಂಶೋಧನೆ ಗಳನ್ನು ಕೈಗೊಳ್ಳಲು, ಉತ್ತಮ ಕಾರ್ಯ ಗಳನ್ನು ಮಾಡಲು ಈ ಪುರಸ್ಕಾರ ಪ್ರೇರಣೆಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT