ಬೆಂಗಳೂರು: ನಗರದ ಹೆಬ್ಬಾಳದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಆರು ಪಥಗಳ ಕಿರು ಸುರಂಗ ರಸ್ತೆ ನಿರ್ಮಿಸಲು ನಾಲ್ಕು ಮೂಲಸೌಕರ್ಯ ಯೋಜನಾ ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿವೆ.

ಕಳೆದ ವಾರ ಬಿಡ್ಗಳನ್ನು ತೆರೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಈ ಯೋಜನೆಗೆ ₹1,086 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.

ಮೂಲಗಳ ಪ್ರಕಾರ, ದಿಲಿಪ್ ಬಿಲ್ಡ್ಕಾನ್ ಲಿಮಿಟೆಡ್ (ಡಿಬಿಎಲ್ ), ಮ್ಯಾಕ್ಸ್ ಇನ್ಫ್ರಾ (ಇಂಡಿಯಾ) ಲಿಮಿಟೆಡ್, ಸೆಮಿಂಡಿಯಾ ಪ್ರಾಜೆಕ್ಟ್ಸ್ ಹಾಗೂ ರಿತ್ವಿಕ್ ಪ್ರಾಜೆಕ್ಟ್ಸ್ ನಿರ್ಮಾಣ ಸಂಸ್ಥೆಗಳು ಭಾಗವಹಿಸಿವೆ. 17 ಕಿ.ಮೀ. ಉದ್ದದ ಸುರಂಗ ರಸ್ತೆ (ಹೆಬ್ಬಾಳ–ಸಿಲ್ಕ್ ಬೋರ್ಡ್ ಜಂಕ್ಷನ್) ಯೋಜನೆಗೆ ಕೇವಲ ಇಬ್ಬರು ಬಿಡ್ದಾರರು ಮಾತ್ರ ಆಸಕ್ತ ವಹಿಸಿದ್ದರು.

ಟೆಂಡರ್ ಪ್ರಕ್ರಿಯೆಯ ಭಾಗವಾಗಿ, ಸುರಂಗ ನಿರ್ಮಾಣದ ಅನುಭವ, ಅರ್ಹತೆ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಪರಿಶೀಲಿಸಲು ಪ್ರಾಧಿಕಾರದ ಅಧಿಕಾರಿಗಳು ಮೊದಲು ತಾಂತ್ರಿಕ ಬಿಡ್ಗಳನ್ನು ಮೌಲ್ಯಮಾಪನ ಮಾಡುವ ನಿರೀಕ್ಷೆಯಿದೆ. ಬಳಿಕ ಆರ್ಥಿಕ ಬಿಡ್ಗಳನ್ನು ತೆರೆಯಲಾಗುತ್ತದೆ ನಂತರ ಗುತ್ತಿಗೆ ನೀಡುವ ಪ್ರಕ್ರಿಯೆ ನಡೆಯಬಹುದು. ಕಿರು ಸುರಂಗ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಡಿಸೆಂಬರ್ನಲ್ಲಿ 2.18 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕಾಗಿ ಬಿಡಿಎ ಟೆಂಡರ್ ಆಹ್ವಾನಿಸಿತ್ತು. ಈ ಸುರಂಗ ರಸ್ತೆಗೆ ಎಸ್ಟೀಮ್ ಮಾಲ್ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್ಗಳನ್ನು ನಿರ್ಮಿಸಲಾಗುತ್ತದೆ. ಭೂಗತ ರಸ್ತೆಯ ಭಾಗವಾಗಿ ರೈಲ್ವೆ ಕೆಳಸೇತುವೆ ನಿರ್ಮಾಣವೂ ಒಳಗೊಂಡಿದ್ದು, ‘ಕಟ್ ಅಂಡ್ ಕವರ್’ ವಿಧಾನ ಬಳಸಿ ನಿರ್ಮಿಸಲಾಗುವುದು. ಅಂದರೆ, ಸುರಂಗ ಕೊರೆಯುವ ಯಂತ್ರಗಳನ್ನು (ಟನಲ್ ಬೋರಿಂಗ್ ಮಷಿನ್) ಬಳಸುವುದಿಲ್ಲ.

ಹೆಬ್ಬಾಳ ಮೇಲ್ಸೇತುವೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ಸುಧಾರಣೆಯ ಉದ್ದೇಶದಿಂದ ಹಲವು ಸಂಸ್ಥೆಗಳು ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿವೆ. ಅವುಗಳಲ್ಲಿ ಭೂಗತ ಮೆಟ್ರೊ ಮಾರ್ಗ, ಉಪನಗರ ರೈಲು ಕಾರಿಡಾರ್ ಹಾಗೂ 18 ಕಿ.ಮೀ. ಉದ್ದದ ಸುರಂಗ ರಸ್ತೆ ಯೋಜನೆ ಸೇರಿವೆ.

ಸಂಚಾರ ತಜ್ಞ ಸತ್ಯ ಅರಿಕುತಾರಂ ಅವರ ಪ್ರಕಾರ, ‘ಸಣ್ಣ ಸುರಂಗ ಯೋಜನೆ ಟ್ರಾಫಿಕ್ ದಟ್ಟಣೆ ಸಮಸ್ಯೆಗೆ ಪರಿಹಾರ ಅಲ್ಲ. ಈ ಯೋಜನೆಗೆ ನೀಡಿರುವ ಸಮರ್ಥನೆ ಹಾಸ್ಯಾಸ್ಪದವಾಗಿದೆ. ದೀರ್ಘ ಸುರಂಗ ಯೋಜನೆಯನ್ನು ಪೂರ್ಣಗೊಳಿಸಲು ಒಂದು ದಶಕ ಬೇಕಾಗುತ್ತದೆ ಎಂಬ ಕಾರಣ ನೀಡಿ ತಕ್ಷಣದ ಪರಿಹಾರ ಕ್ರಮವಾಗಿ ಸರ್ಕಾರ ಈ ಯೋಜನೆಯನ್ನು ಪ್ರಸ್ತಾಪಿಸಿತ್ತು. ಆದರೆ ಅದೇ ಸರ್ಕಾರ, ದೀರ್ಘ ಸುರಂಗವನ್ನು ಕೇವಲ 26 ತಿಂಗಳಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಅದರ ವೆಚ್ಚವನ್ನು ₹2,300 ಕೋಟಿ ಹೆಚ್ಚಿಸಿದ್ದನ್ನು ಮರೆತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.