ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಬಲ್ ಔಷಧಿ ಮಹಿಳೆ ನಂಬಿ ₹ 93.23 ಲಕ್ಷ ಕಳೆದುಕೊಂಡ ಉದ್ಯಮಿ!

Last Updated 23 ಅಕ್ಟೋಬರ್ 2021, 16:17 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಕರೆ ಮೂಲಕ ಪರಿಚಯವಾದ ಮಹಿಳೆಯ ಮಾತು ನಂಬಿ ಹರ್ಬಲ್ ಔಷಧಿ ವ್ಯವಹಾರ ನಡೆಸಲು ಮುಂದಾಗಿದ್ದ ನಗರದ ಉದ್ಯಮಿಯೊಬ್ಬರು ₹ 93.23 ಲಕ್ಷ ಕಳೆದುಕೊಂಡಿದ್ದಾರೆ.

‘ಎಲಿಜಬೆತ್ ಜೋಬರ್ಗ್‌ ಹೆಸರು ಹೇಳಿಕೊಂಡು ಪರಿಚಯವಾಗಿದ್ದ ಮಹಿಳೆ ನನ್ನಿಂದ ಹಂತ ಹಂತವಾಗಿ ₹ 93.23 ಲಕ್ಷ ಪಡೆದು ವಂಚಿಸಿದ್ದಾಳೆ’ ಎಂದು ಆರೋಪಿಸಿ ಎಲೆಕ್ಟ್ರಾನಿಕ್ ಸಿಟಿ ನಿವಾಸಿಯೂ ಆಗಿರುವ 45 ವರ್ಷದ ಉದ್ಯಮಿ ದೂರು ನೀಡಿದ್ದಾರೆ. ಇದರನ್ವಯ ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೇ 14ರಂದು ಉದ್ಯಮಿಗೆ ಕರೆ ಮಾಡಿದ್ದ ಮಹಿಳೆ, ವಿದೇಶಿ ಪ್ರಜೆಯೆಂದು ಪರಿಚಯಿಸಿಕೊಂಡಿದ್ದಳು. ತನ್ನ ಹೆಸರು ಎಲಿಜಬೆತ್ ಜೋಬರ್ಗ್‌ ಎಂಬುದಾಗಿ ಹೇಳಿ ಆತ್ಮಿಯವಾಗಿ ಮಾತನಾಡಿದ್ದಳು. ತಾನೊಬ್ಬಳು ಹರ್ಬಲ್ ಔಷಧಿ ಉದ್ಯಮಿ ಎಂಬುದಾಗಿಯೂ ಹೇಳಿದ್ದಳು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೆಚ್ಚು ಲಾಭ ಬರುವ ಹರ್ಬಲ್ ಔಷಧಿ ಉದ್ಯಮವನ್ನು ಭಾರತದಲ್ಲಿ ನಡೆಸಲು ಇಚ್ಛಿಸಿರುವುದಾಗಿ ಹೇಳಿದ್ದ ಮಹಿಳೆ, ಅದರ ಉಸ್ತುವಾರಿಯನ್ನು ಕುಮಾರ್ ತಾಪ ಕೃಷ್ಣ ಎಂಬಾತನಿಗೆ ವಹಿಸಿರುವಾಗಿ ತಿಳಿಸಿದ್ದಳು. ದೂರುದಾರ ಉದ್ಯಮಿಯನ್ನೂ ಪಾಲುದಾರರನ್ನಾಗಿ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಆರೋಪಿ, ಅವರಿಗೆ ಕುಮಾರ್ ತಾಪ ಕೃಷ್ಣ ಮೊಬೈಲ್ ನಂಬರ್ ನೀಡಿದ್ದಳು.’

‘ಆತನಿಗೆ ಕರೆ ಮಾಡಿ ಉದ್ಯಮಿ ಮಾತನಾಡಿದ್ದರು. ‘ಉದ್ಯಮ ಆರಂಭಕ್ಕೆ ಕೆಲ ಪ್ರಕ್ರಿಯೆ ನಡೆಸಬೇಕು. ಅದಕ್ಕೆ ಹಣ ಖರ್ಚಾಗುತ್ತದೆ’ ಎಂದು ಆರೋಪಿ ಹೇಳಿದ್ದ. ಮಹಿಳೆ ಹಾಗೂ ಕುಮಾರ್ ತಾಪ ಕೃಷ್ಣನ ಮಾತು ನಂಬಿದ್ದ ಉದ್ಯಮಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ಹಾಕಿದ್ದರು. ಹಣ ಪಡೆದ ಬಳಿಕ ಆರೋಪಿಗಳು, ಯಾವುದೇ ಉದ್ಯಮ ಸ್ಥಾಪಿಸದೇ ನಾಪತ್ತೆಯಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT