ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಭೇಟಿಗೆ ತಂದೆಗೆ ಅವಕಾಶ ನೀಡಿದ ಹೈಕೋರ್ಟ್‌

Published 4 ಮೇ 2023, 21:04 IST
Last Updated 4 ಮೇ 2023, 21:04 IST
ಅಕ್ಷರ ಗಾತ್ರ

ಬೆಂಗಳೂರು: ‘ಗಂಡ ನನ್ನನ್ನು ತ್ಯಜಿಸಿದ ನಂತರ ಎರಡು ಮದುವೆಯಾಗಿದ್ದಾನೆ. ಮಗಳನ್ನು ನೋಡಲು ಒಮ್ಮೆಯೂ ಬರಲಿಲ್ಲ. ಇಂತಹ ಮನುಷ್ಯನಿಗೆ ತನ್ನ ಮಗಳನ್ನು ಭೇಟಿ ಮಾಡುವ ಹಕ್ಕು ನೀಡಬಾರದು’ ಎಂಬ ಮಹಿಳೆಯೊಬ್ಬರ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಮಗಳನ್ನು ಭೇಟಿ ಮಾಡಲು ತಂದೆಗೆ ಅನುಮತಿ ನೀಡುವ ಮೂಲಕ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಕುರಿತಂತೆ ಆದೇಶಿಸಿದೆ.

‘ಮಗಳು ತಂದೆಯ ಆರೈಕೆ, ಪ್ರೀತಿ ಮತ್ತು ವಾತ್ಸಲವ್ಯನ್ನು ಕಾಣಬೇಕಿದೆ. ಅದಕ್ಕಾಗಿ ಶಾಲೆಗೆ ರಜೆಯಿದ್ದ ಸಂದರ್ಭದಲ್ಲಿ ಭೇಟಿ ಮಾಡುವ ಮತ್ತು ತನ್ನ ಮನೆಗೆ ಕರೆದುಕೊಂಡು ಹೋಗಲು ತಂದೆಗೆ ಅನುಮತಿ ನೀಡಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ. ಮಗಳ ಭೇಟಿಯ ಹಕ್ಕನ್ನು ವಿಚ್ಛೇದಿತ ಪತಿಗೆ ದಯಪಾಲಿಸಿದರೆ, ಕ್ಷೇಮವಾಗಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆತಂಕವನ್ನು ಪರಿಗಣಿಸಿಯೇ ಕೌಟುಂಬಿಕ ನ್ಯಾಯಾಲಯ ಮಗಳ ಶಾಶ್ವತ ಸುಪರ್ದಿಯನ್ನು ತಾಯಿಗೆ ನೀಡಿದೆ ಮತ್ತು ತಂದೆಗೆ ಕೇವಲ ಭೇಟಿಯ ಹಕ್ಕನ್ನು ನೀಡಿದೆ. ಹೀಗಾಗಿ, ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT