ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಚಾರಿತ್ರಿಕ ದಾಖಲೆಗಳ ಪ್ರದರ್ಶನ

Last Updated 11 ಆಗಸ್ಟ್ 2022, 21:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಇತಿಹಾಸ ನೆನಪಿಸುವ ದಾಖಲೆ ಮತ್ತು ಛಾಯಾಚಿತ್ರಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಸ್ವಾತಂತ್ರ್ಯಪೂರ್ವ ಮತ್ತು ನಂತರದ ಮಹತ್ವದ ಘಟನಾವಳಿಗಳ ದಾಖಲೆಗಳು ಮತ್ತು ಚಿತ್ರಗಳು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅನಾವರಣಗೊಂಡಿವೆ.

ಸ್ವಾತಂತ್ರ್ಯದ ಅಮೃತಮಹೋತ್ಸದ ಅಂಗವಾಗಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯು ಈ ಚಾರಿತ್ರಿಕ ದಾಖಲೆಗಳ ಪ್ರದರ್ಶನವನ್ನು ಆಯೋಜಿಸಿದೆ. ಇದೇ 12ರವರೆಗೆ ಈ ಪ್ರದರ್ಶನ ನಡೆಯಲಿದೆ.

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ವಿವಾಹ ಆಹ್ವಾನ ಪತ್ರಿಕೆ (1902), ಮೈಸೂರು ಬ್ಯಾಂಕ್‌ ಸ್ಥಾಪನೆ ಆದೇಶ (1913), ಕೆ.ಸಿ. ರೆಡ್ಡಿ ಸಚಿವ ಸಂಪುಟ, ಕೆಂಗಲ್‌ ಹನುಮಂತಯ್ಯ ಮತ್ತು ಅವರ ಸಂಪುಟ ಸದಸ್ಯರು, ಬೆಳಗಾವಿ ಕಾಂಗ್ರೆಸ್‌ ಅಧಿವೇಶನದಲ್ಲಿ
ಗಾಂಧಿ ಪಾಲ್ಗೊಳ್ಳುವಿಕೆ ಸೇರಿ ಹತ್ತಾರು ಅಮೂಲ್ಯ ಛಾಯಾಚಿತ್ರಗಳು ಗಮನ ಸೆಳೆಯುತ್ತಿವೆ.

1878ರಲ್ಲಿ ನಿರ್ಮಾಣವಾದ ನಗರದ ಮೇಯೋಹಾಲ್‌ ಕಟ್ಟಡ ನಿರ್ಮಾಣಕ್ಕೆ ₹49,209 ವೆಚ್ಚವಾಗಿರುವ ವಿವರದ ದಾಖಲೆಯ ಚಿತ್ರ, ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ ಸರ್‌ ಎಂ. ವಿಶ್ವೇಶ್ವರಯ್ಯ ಅವರಿಗೆ ₹1250 ಮಾಸಿಕ ಪಿಂಚಣಿ ಮಂಜೂರು ಮಾಡಿರುವ ಆದೇಶದ (1919) ಪತ್ರ, ಕನ್ನಡ ಸಾಹಿತ್ಯಕ್ಕಾಗಿ ಪ್ರತ್ಯೇಕವಾದ ಸಂಸ್ಥೆಯನ್ನು ನಿರ್ಮಿಸಿರುವ ಬಗ್ಗೆ ಆದೇಶ ಹೊರಡಿಸಿರುವುದನ್ನು ಇಲ್ಲಿ ಪ್ರದರ್ಶಿಸಲಾಗಿದೆ.

‘157ಕ್ಕೂ ಹೆಚ್ಚು ಮಹತ್ವದ ದಾಖಲೆಗಳನ್ನು ಪ್ರದರ್ಶಿಸಲಾಗಿದೆ.ಮಹತ್ವದ ದಾಖಲೆಗಳನ್ನ ವೆಬ್‌ಸೈಟ್‌ನಲ್ಲೂ ನೋಡಬಹುದು’ ಎಂದು ರಾಜ್ಯ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಸದಾನಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT