ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಶೇ 41 ಮಂದಿಗೆ ಅಧಿಕ ರಕ್ತದೊತ್ತಡ

ಇಂಡಿಯ ಹಾರ್ಟ್‌ ಸ್ಟಡಿ ಸಮೀಕ್ಷೆಯಿಂದ ವರದಿ
Last Updated 20 ಆಗಸ್ಟ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಶೇ 41 ಮಂದಿಗೆ ಅಧಿಕ ರಕ್ತದೊತ್ತಡ ಇದೆ ಎಂದು ‘ಇಂಡಿಯಾ ಹಾರ್ಟ್‌ ಸ್ಟಡಿ’ (ಐಎಚ್‌ಎಸ್‌) ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 12.7 ಮಂದಿಗೆ ಅಧಿಕ ಪ್ರಮಾಣದ ರಕ್ತದೊತ್ತಡ ಇರುವ ಬಗ್ಗೆ ಅರಿವೇ ಇಲ್ಲ ಎಂದಿದ್ದಾರೆ.

ಎರಿಸ್‌ ಲೈಫ್‌ ಸೈನ್ಸಸ್‌ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದಸಮೀಕ್ಷೆಯ ಪ್ರಧಾನ ಸಂಶೋಧಕ ಡಾ.ಉಪೇಂದ್ರ ಕೌಲ್‌, ‘ಭಾರತೀಯರಲ್ಲಿ ಅಧಿಕ ಪ್ರಮಾಣದ ಸರಾಸರಿ ಹೃದಯಬಡಿತ ಪ್ರತಿ ನಿಮಿಷಕ್ಕೆ 80ರಷ್ಟಿದೆ. ಇದು ಸರಾಸರಿ ಅಪೇಕ್ಷಿತ ಹೃದಯಬಡಿತಕ್ಕಿಂತ ಅಧಿಕ.ವೈಟ್‍ಕೋಟ್ ಮತ್ತು ಮುಸುಕಿದ ರಕ್ತದೊತ್ತಡ ಎಂಬ ಎರಡು ರೀತಿಯಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕಿದೆ’ ಎಂದರು.

‘ಅಧಿಕ ರಕ್ತದ ಒತ್ತಡ ಸಮಸ್ಯೆ ಇತರೆ ಕಾಯಿಲೆಗಳಿಗಿಂತ ಭಿನ್ನವಾಗಿದ್ದು, ಮೇಲ್ನೋಟಕ್ಕೆ ಗೋಚರಿಸುವುದಿಲ್ಲ. ಇದನ್ನು ‘ಸೈಲೆಂಟ್ ಕಿಲ್ಲರ್’ ಎಂದು ಹೇಳಲಾಗುತ್ತದೆ. 15 ವರ್ಷ ದಾಟಿದವರಲ್ಲಿ ಈ ಸಮಸ್ಯೆ ಕಂಡುಬರುತ್ತಿರುವುದು ಅಪಾಯಕಾರಿ ಸಂಗತಿ’ ಎಂದುಬಾಳಿಗಾ ಡಯಾಗ್ನಾಸ್ಟಿಕ್ಸ್‌ ನಿರ್ದೇಶಕ ಡಾ.ಬಿ.ವಿ.ಬಾಳಿಗಾ ತಿಳಿಸಿದರು.

ಸಾಗರ್ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ.ಸಂಜೀವ್ ಹಿರೇಮಠ, ‘9 ತಿಂಗಳುಗಳು ನಡೆದ ಸಮೀಕ್ಷೆಯಲ್ಲಿ 15ರಾಜ್ಯಗಳ 18,918 ಮಂದಿಯ ರಕ್ತದ ಒತ್ತಡ ಪರೀಕ್ಷಿಸಲಾಯಿತು. ಇದಕ್ಕಾಗಿ 1,233 ವೈದ್ಯರ ನೆರವು ಪಡೆಯಲಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT