ಬೆಂಗಳೂರು: ಇಲ್ಲಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯು (ಐಜಿಐಸಿಎಚ್) ಅನಾರೋಗ್ಯ ಸಮಸ್ಯೆ ಸಂಬಂಧ ದಾಖಲಾಗುವ ಮಕ್ಕಳ ಪಾಲಕರು ಹಾಗೂ ಸಹಾಯಕರಿಗೆ ‘ಡಾರ್ಮೆಟರಿ’ ನಿರ್ಮಿಸಲು ಮುಂದಾಗಿದ್ದು, ಇದು ಮಕ್ಕಳ ಚಿಕಿತ್ಸಾ ಅವಧಿಯಲ್ಲಿ ಆಶ್ರಯ ಒದಗಿಸಲಿದೆ.

ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆ ಒದಗಿಸುತ್ತಿರುವ ಸಂಸ್ಥೆಯು ಮಕ್ಕಳ ಚಿಕಿತ್ಸೆಗೆ ಹೆಸರಾಗಿದೆ. ಆದ್ದರಿಂದ ರಾಜ್ಯದ ವಿವಿಧೆಡೆಯಿಂದ ಚಿಕಿತ್ಸೆಗಾಗಿ ಮಕ್ಕಳನ್ನು ಪಾಲಕರು ಇಲ್ಲಿಗೆ ಕರೆತರುತ್ತಾರೆ. ಇದರಿಂದಾಗಿ ಇಲ್ಲಿಗೆ ಚಿಕಿತ್ಸೆಗೆ ಬರುವ ಮಕ್ಕಳ ಜತೆಗೆ ಅವರ ಸಹಾಯಕರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮಕ್ಕಳ ಚಿಕಿತ್ಸಾ ಅವಧಿಯಲ್ಲಿ ಸಹಾಯಕರಿಗೆ ಹಾಲಿ ವ್ಯವಸ್ಥೆಯಡಿ ಆಶ್ರಯ ಒದಗಿಸುವುದು ಸವಾಲಾಗಿದೆ. ಆದ್ದರಿಂದ ಸಂಸ್ಥೆಯ ಆವರಣದಲ್ಲಿಯೇ ಪ್ರತ್ಯೇಕ ವಿಶ್ರಾಂತಿ ಧಾಮ ನಿರ್ಮಿಸಲಾಗುತ್ತಿದೆ.

ಸಂಸ್ಥೆಯ ಆವರಣದಲ್ಲಿ ಈಗಾಗಲೇ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಘಟಕ ತಲೆಯೆತ್ತಿದ್ದು, ಕಾರ್ಯಾರಂಭದ ಬಳಿಕ ಅಲ್ಲಿ 450 ಹಾಸಿಗೆಗಳು ಲಭ್ಯವಾಗಲಿವೆ. ಒಟ್ಟು ಹಾಸಿಗೆಗಳ ಸಂಖ್ಯೆ 900ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ಚಿಕಿತ್ಸೆಗೆ ದಾಖಲಾಗುವ ಮಕ್ಕಳ ಜತೆಗೆ ಅವರ ಸಹಾಯಕರ ಸಂಖ್ಯೆಯೂ ಹೆಚ್ಚಳವಾಗುತ್ತದೆ. ಇಲ್ಲಿಗೆ ಚಿಕಿತ್ಸೆಗೆ ಬರುವವರಲ್ಲಿ ಬಹುತೇಕರು ಬಡ ಮತ್ತು ಮಧ್ಯಮ ವರ್ಗದವರಾಗಿದ್ದು, ಚಿಕಿತ್ಸಾ ಅವಧಿಯಲ್ಲಿ ಹೆಚ್ಚುವರಿ ಸಹಾಯಕರಿಗೆ ಆಶ್ರಯ ಒದಗಿಸುವುದು ಸಮಸ್ಯೆಯಾಗಲಿದೆ. ಈಗಾಗಲೇ ಕೆಲವರು ಆಸ್ಪತ್ರೆಯ ಆವರಣದಲ್ಲಿ, ಖಾಲಿ ಸ್ಥಳಾವಕಾಶದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ, ಸಂಸ್ಥೆಯು ಆಂತರಿಕ ಸಂಪನ್ಮೂಲದಿಂದ ಸಹಾಯಕರಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸುತ್ತಿದೆ.

2 ಮಹಡಿ ಕಟ್ಟಡ: ಸದ್ಯ ಎರಡು ಮಹಡಿಗಳನ್ನು ಒಳಗೊಂಡ ಕಟ್ಟಡವನ್ನು ನಿರ್ಮಿಸಲು ಸಂಸ್ಥೆ ಕಾರ್ಯಯೋಜನೆ ರೂಪಿಸಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಆರು ತಿಂಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಈ ಕಟ್ಟಡವನ್ನು ₹ 3.6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಒಂದು ಮಹಡಿಯನ್ನು ಮಹಿಳೆಯರಿಗೆ, ಇನ್ನೊಂದು ಮಹಡಿಯನ್ನು ಪುರುಷರಿಗೆ ಮೀಸಲಿಡಲಾಗುತ್ತದೆ. ಪ್ರತಿ ಮಹಡಿಯಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚಿನ ಸಹಾಯಕರು ಆಶ್ರಯ ಪಡೆಯಬಹುದಾಗಿದೆ. ಅಡುಗೆ ಮನೆ, ಶುದ್ಧ ಕುಡಿಯುವ ನೀರು, ಬಟ್ಟೆ ತೊಳೆಯುವ ಯಂತ್ರ, ಲಾಕರ್, ಶೌಚಾಲಯ, ಟಿ.ವಿ. ಸೇರಿ ಅಗತ್ಯ ಸೌಕರ್ಯವನ್ನು ಎರಡೂ ಮಹಡಿಯಲ್ಲಿ ಒದಗಿಸಲಾಗುತ್ತದೆ.

‘ವಿಶ್ರಾಂತಿ ಧಾಮ ನಿರ್ಮಾಣ ಯೋಜನೆಯು ಆರು ಮಹಡಿಗಳನ್ನು ಒಳಗೊಂಡಿದೆ. ಸದ್ಯ ಎರಡು ಮಹಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ನಾಲ್ಕು ಮಹಡಿಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಅಲ್ಲಿ ಪ್ರತಿ ಮಹಡಿಯಲ್ಲಿ 14 ಕೊಠಡಿಗಳು ಬರಲಿವೆ. ಸಂಸ್ಥೆಯು ಆಂತರಿಕ ಸಂಪನ್ಮೂಲದಿಂದ ನಿರ್ಮಿಸುತ್ತಿರುವುದರಿಂದ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ’ ಎಂದು ಸಂಸ್ಥೆಯ ಎಂಜಿನಿಯರ್ ತಿಳಿಸಿದರು.

ಮಕ್ಕಳ ಸಹಾಯಕರ ಸಮಸ್ಯೆ ಮನಗಂಡು ಅವರಿಗಾಗಿ ಪ್ರತ್ಯೇಕ ಕಟ್ಟಡ ನಿರ್ಮಿಸಲು ಮುಂದಾಗಿದ್ದೇವೆ. ಸಂಪನ್ಮೂಲದ ಲಭ್ಯತೆ ಅನುಸಾರ ಕಟ್ಟಡದ ಸಾಮರ್ಥ್ಯ ಹೆಚ್ಚಿಸುತ್ತೇವೆ
ಡಾ. ಸಂಜಯ್ ಕೆ.ಎಸ್. ಐಜಿಐಸಿಎಚ್ ನಿರ್ದೇಶಕ

ಹಾಲಿ ಕಟ್ಟಡ ಡೇ ಕೇರ್ ಸೆಂಟರ್

ಸದ್ಯ ಸಂಸ್ಥೆಯ ಪಕ್ಕದಲ್ಲಿರುವ ಕಟ್ಟಡವೊಂದರಲ್ಲಿ ಪುರುಷ ಸಹಾಯಕರು ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರ ವಸತಿನಿಲಯದಲ್ಲಿ ಮಹಿಳಾ ಸಹಾಯಕರಿಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಜತೆಗೆ ಒಬ್ಬ ಸಹಾಯಕರಿಗೆ ಇರಲು ಅವಕಾಶವಿದೆ. ಹಾಗಾಗಿ ಉಳಿದ ಸಹಾಯಕರು ತೀವ್ರ ನಿಗಾ ಘಟಕದಲ್ಲಿ ಇರುವ ಮಕ್ಕಳ ಪಾಲಕರು ಈ ಕಟ್ಟಡಗಳಲ್ಲಿ ಚಿಕಿತ್ಸಾ ಅವಧಿಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ನೂತನ ವಿಶ್ರಾಂತಿ ಧಾಮ ನಿರ್ಮಾಣವಾದ ಬಳಿಕ ಸಂಸ್ಥೆಯ ಪಕ್ಕದಲ್ಲಿರುವ ವಿಶ್ರಾಂತಿ ಕಟ್ಟಡವು ‘ಡೇ ಕೇರ್ ಸೆಂಟರ್’ ಆಗಿ ಪರಿವರ್ತನೆಯಾಗಲಿದೆ. ಸದ್ಯ ಇರುವ ಕಟ್ಟಡದಲ್ಲಿ 70ರಿಂದ 80 ಮಂದಿ ಆಶ್ರಯ ಪಡೆದರೆ ವೈದ್ಯಕೀಯ ವಿದ್ಯಾರ್ಥಿನಿಯರ ವಸತಿ ನಿಲಯದ ನೆಲಮಹಡಿಯಲ್ಲಿ ರಾತ್ರಿ ವೇಳೆ ತಂಗಲು 60 ಮಹಿಳಾ ಸಹಾಯಕರಿಗೆ ಅವಕಾಶ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.