ಗುರುವಾರ , ಏಪ್ರಿಲ್ 2, 2020
19 °C

ಹೆಚ್ಚು ಕಾಲೇಜು: 8ನೇ ಸ್ಥಾನದಲ್ಲಿ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದಲ್ಲಿ ಹೆಚ್ಚು ಕಾಲೇಜುಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹೇಳಿದರು.

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಬೆಂಗಳೂರು, ವಿಜಯಪುರ ಪ್ರಾದೇಶಿಕ ಪದವೀಧರರ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದಾಗ ‌ದೇಶದಲ್ಲಿ 20 ವಿಶ್ವವಿದ್ಯಾಲಯಗಳು, 500 ಕಾಲೇಜುಗಳಿದ್ದವು. ಇವುಗಳಲ್ಲಿ 2.3 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. 2018-19ರ ಸರ್ವೆ ಪ್ರಕಾರ ಈಗ ದೇಶದಲ್ಲಿ 993 ವಿಶ್ವವಿದ್ಯಾಲಯಗಳಿದ್ದು, 3.74 ಕೋಟಿ ವಿದ್ಯಾರ್ಥಿಗಳಿದ್ದಾರೆ’ ಎಂದರು.

‘ಮುಕ್ತ ವಿಶ್ವವಿದ್ಯಾಲಯದ ಪರಿಕಲ್ಪನೆ ವಿಶ್ವದಾದ್ಯಂತ‌ ಜನಪ್ರಿಯತೆ ಗಳಿಸಿದೆ. ಗುಣಮಟ್ಟದ ಶಿಕ್ಷಣಕ್ಕೂ ಅವು ಆದ್ಯತೆ ನೀಡುತ್ತಿವೆ’ ಎಂದು ಹೇಳಿದರು.

ಪದವಿ ಪ್ರದಾನ: ಬೆಂಗಳೂರಿನ 4,028 ಮತ್ತು ವಿಜಯಪುರದ 859 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ರಿಬಾ ಮಾರಿಯಾ ಕುರಿಯನ್ (ಎಂಎ ಸೈಕಾಲಜಿ), ಸಿ.ಆರ್. ಶಿಲ್ಪಾ (ಬಿ.ಇಡಿ), ವರ್ಸೆಲಿನ್ ತೆಲಾಸ್ ಮೇರಿ ಎ (ಬಿಎಸ್ಸಿ ನರ್ಸಿಂಗ್), ರಿಚು ಹ್ಯಾರಿಸ್ (ಡಿಪ್ಲೊಮಾ ಇನ್ ಅರ್ಲಿ ಚೈಲ್ಡ್ ಹುಡ್ ಕೇರ್ ಆ್ಯಂಡ್ ಎಜುಕೇಶನ್), ಮಾನಸಾ ಪರಮೇಶ್ವರ ಹೆಗಡೆ (ಪೌಷ್ಠಿಕ ಮತ್ತು ಆರೋಗ್ಯ ಶಿಕ್ಷಣದಲ್ಲಿ ಡಿಪ್ಲೊಮಾ) ಚಿನ್ನದ ಪದಕ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು