ಬೆಂಗಳೂರು: ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯ್) ಕ್ರೀಡಾ ಶೂಟಿಂಗ್ ರೇಂಜ್ನಲ್ಲಿ ನಡೆದ ‘ವಾರ್ಷಿಕ ಅಂತರ ಗುಂಪು ಕ್ರೀಡಾ ಶೂಟಿಂಗ್ ಚಾಂಪಿಯನ್ಶಿಪ್ (ಐಜಿಎಸ್ಎಸ್ಸಿ)- 2025'ರಲ್ಲಿ ಬೆಂಗಳೂರಿನ ಎನ್ಸಿಸಿ 'ಎ' ಗುಂಪು ಜಯಗಳಿಸಿದೆ.

ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಆಶ್ರಯದಲ್ಲಿ ಬೆಂಗಳೂರಿನ 1ನೇ ಕರ್ನಾಟಕ ಬೆಟಾಲಿಯನ್ ಮತ್ತು 1 ನೇ ಕರ್ನಾಟಕ ಸಿಗ್ನಲ್ ಎನ್ಸಿಸಿ ಜಂಟಿಯಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಆರು ಎನ್ಸಿಸಿ ಗುಂಪುಗಳ ಕರ್ನಾಟಕ ಮತ್ತು ಗೋವಾದ 100ಕ್ಕೂ ಹೆಚ್ಚು ಕೆಡೆಟ್ಗಳು ಭಾಗವಹಿಸಿದ್ದರು.

ಬೆಂಗಳೂರಿನ ಎನ್ಸಿಸಿ ಎ ಗುಂಪು ಎಂಟು ಚಿನ್ನ, ಆರು ಬೆಳ್ಳಿ, ಒಂದು ಕಂಚಿನ ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು. ಎನ್ಸಿಸಿ 'ಬಿ' ಗುಂಪು ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಹಾಗೂ ಬೆಳಗಾವಿಯ ಎನ್ಸಿಸಿ ಗುಂಪು ಎರಡು ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು.

ನಗರದ ಆರ್ವಿಇಸಿಇ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ಎನ್ಸಿಸಿ ನಿರ್ದೇಶನಾಲಯದ ಡಿಡಿಜಿ ಏರ್ ಕಮಾಂಡರ್ ಎಸ್. ಬಿ. ಅರುಣ್ಕುಮಾರ್ ಅವರು ವಿಜೇತರಿಗೆ ‘ಐಜಿಎಸ್ಎಸ್ಸಿ 2025‘ ಪಾರಿತೋಷಕ ಮತ್ತು ಪದಕಗಳನ್ನು ಪ್ರದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.