ವಿವಿಧ ಫ್ಲೇವರ್‌ಗಳ ಸಿರಪ್‌ಗಳನ್ನು ಉತ್ಸವದಲ್ಲಿ ಆಕರ್ಷಕವಾಗಿ ಜೋಡಿಸಿಡಲಾಗಿತ್ತು.
ಪ್ರಜಾವಾಣಿ ಚಿತ್ರ
‘ಕಸ್ಕಾರ’ ಕಾಫಿಯನ್ನು ಎಸ್‌ಸಿಇ ಕಂಪನಿಯ ಮಳಿಗೆಯಲ್ಲಿ ನೀಡುತ್ತಿರುವುದು
ಪ್ರಜಾವಾಣಿ ಚಿತ್ರ
ವಿಸ್ಕಿ ಫ್ಲೇವರ್ !
ಬಾಗ್ಮನೆ ಕೃಷ್ಣಗಿರಿ ಬೈನೆಕೆರೆ ಅಲಲ್‌ಗಂಡಿ ಸಹಿತ ವಿವಿಧ ಕಾಫಿ ಬೆಳೆಗಾರರು ಸೇರಿ ಚಂದ್ರದ್ರೋಣ ಸಂಘ ಕಟ್ಟಿದ್ದು ಈ ಸಂಘದ ಮಳಿಗೆಯಲ್ಲಿ ವಿಸ್ಕಿ ಫ್ಲೇವರ್ ಕಾಫಿ ಗಮನ ಸೆಳೆಯಿತು. ಎ ಎಎ ಎಎಎ ಬಿ ಸಹಿತ ವಿವಿಧ ದರ್ಜೆಯ ಕಾಫಿ ಬೀಜಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಅದರಲ್ಲಿ ‘ವಿಸ್ಕಿ ಫ್ಲೇವರ್’ ಕಾಫಿ ಬೀಜಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ವಿಸ್ಕಿಯಲ್ಲಿ ಮೂರು ತಿಂಗಳು ಹಾಕಿ ಇಟ್ಟು ಈ ಫ್ಲೇವರ್ ತಯಾರಿಸಲಾಗಿದೆ ಎಂದು ಮಳಿಗೆಯ ಅಶ್ವಿನ್ ಜಗತ್ ವಿವರಿಸಿದರು. ವೈನ್ ಕಾಫಿ ಸಹಿತ ಎಲ್ಲ ಪಾನಿಯಗಳಿಗೆ ಕಾಫಿ ಸ್ವಾದ ಬೇರೆ ಸ್ವಾದಗಳ ಸಿರಪ್‌ಗಳನ್ನು ಫ್ಲೇವರ್ ಜೀನಿಯಸ್ ಕಂಪನಿಯು ಪ್ರದರ್ಶನಕ್ಕೆ ಇಟ್ಟಿತ್ತು. ಕಾಫಿ ಪುಡಿ ಮಾಡುವ ಯಂತ್ರಗಳು ಕಾಫಿ ಸಂರಕ್ಷಿಸಿಡುವ ಯಂತ್ರಗಳು ಗಮನ ಸೆಳೆದವು.