ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ವೇಳೆ ತಡೆರಹಿತ ವಿದ್ಯುತ್ ಪೂರೈಕೆಗೆ ಕೆಪಿಟಿಸಿಎಲ್‌ ಕ್ರಮ

ಇನ್ಸುಲೇಟೆಡ್‌ ಏರಿಯಲ್‌ ವರ್ಕ್‌ ಫ್ಲಾಟ್‌ಫಾರ್ಮ್‌ ವಾಹನ ನಿಯೋಜನೆ
Published 2 ಏಪ್ರಿಲ್ 2024, 16:15 IST
Last Updated 2 ಏಪ್ರಿಲ್ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್ ಮಾರ್ಗಗಳ ದುರಸ್ತಿ ಮತ್ತು ನಿರ್ವಹಣೆ ಸಮಯದಲ್ಲೂ ತಡೆ ರಹಿತ ವಿದ್ಯುತ್‌ ಪೂರೈಸುವುದಕ್ಕಾಗಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು(ಕೆಪಿಟಿಸಿಎಲ್‌), 400 ಕೆ.ವಿವರೆಗಿನ ಪ್ರಸರಣ ಮಾರ್ಗಗಳು ಮತ್ತು ಸಬ್‌ಸ್ಟೇಷನ್‌ಗಳ ನಿರ್ವಹಣೆಗೆ ಇನ್ಸುಲೇಟೆಡ್‌ ಏರಿಯಲ್‌ ವರ್ಕ್‌ ಫ್ಲಾಟ್‌ಫಾರ್ಮ್‌ ವಾಹನಗಳನ್ನು ನಿಯೋಜಿಸುತ್ತಿದೆ.

ಈಗಾಗಲೇ ಬೆಂಗಳೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿ ವ್ಯಾಪ್ತಿಯ 4‌00 ಕೆ.ವಿವರೆಗಿನ ಪ್ರಸರಣ ಮಾರ್ಗಗಳು ಮತ್ತು ಸಬ್‌ಸ್ಟೇಷನ್‌ಗಳಲ್ಲಿ ಇಂಥ ಮೂರು ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಈಗ ಮೈಸೂರು ಮತ್ತು ಕಲಬುರಗಿ ಪ್ರದೇಶಗಳಿಗೆ ಎರಡು ವಾಹನಗಳನ್ನು ನಿಯೋಜಿಸಲಾಗುತ್ತಿದೆ. 

‘ವಿದ್ಯುತ್ ಮಾರ್ಗಗಳ ನಿರ್ವಹಣೆ ವೇಳೆ ಸ್ಥಗಿತಗೊಳಿಸಿದ ವಿದ್ಯುತ್ ಮರುಸ್ಥಾಪಿಸಲು ಕನಿಷ್ಠ ಐದು ಗಂಟೆ ಬೇಕಾಗುತ್ತದೆ. ಆದರೆ, ಹಾಟ್ (ಲೈವ್) ಲೈನ್ ನಿರ್ವಹಣೆ ತಂತ್ರಜ್ಞಾನದ ಅತ್ಯಾಧುನಿಕ ಇನ್ಸುಲೇಟೆಡ್ ಬಕೆಟ್ ವ್ಯಾನ್, ಇನ್ಸುಲೇಟೆಡ್ ಬಕೆಟ್ ಮತ್ತು ಇನ್ಸುಲೇಟೆಡ್ ಸ್ಕ್ಯಾಫೋಲ್ಡಿಂಗ್ ಬಳಕೆಯಿಂದ ವಿದ್ಯುತ್‌ ಸ್ಥಗಿತಗೊಳಿಸದೆ ನಿರ್ವಹಣಾ ಚಟುವಟಿಕೆ ಕೈಗೊಳ್ಳಬಹುದು. ಇದರಿಂದ ಗ್ರಾಹಕರಿಗೆ ತಡೆರಹಿತ ವಿದ್ಯುತ್‌ ಪೂರೈಕೆ ಜತೆಗೆ ವಿದ್ಯುತ್‌ ಕಂಪನಿಗಳ ನಿರ್ವಹಣಾ ವೆಚ್ಚವನ್ನೂ ಕಡಿತಗೊಳಿಸಬಹುದು’ ಎಂದು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್ ಪಾಂಡೆ ವಿವರಿಸಿದ್ದಾರೆ.

‘ಬ್ರೆಜಿಲ್‌ನಿಂದ ಈ ವಾಹನಗಳನ್ನು ಖರೀದಿಸಲಾಗಿದೆ. ವಾಹನದ ಬಳಕೆ ಮತ್ತು ನಿರ್ವಹಣೆಗಾಗಿ l5 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿದ್ಯುತ್ ಮಾರ್ಗಗಳ ನಿರ್ವಹಣೆ ವೇಳೆ ಗಂಟೆಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕು. ಆದರೆ ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳ ಬಳಕೆಯಿಂದ ನಿರ್ವಹಣೆ ಸಮಯದಲ್ಲೂ ತಡೆರಹಿತ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ’
ಕೆ.ಜೆ.ಜಾರ್ಜ್‌ ಇಂಧನ ಸಚಿವ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT