ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನಾಚರಣೆ: ಮಹಿಳೆಯರೇ ನಿರ್ವಹಿಸುವ ‘ರಾಣಿ ಎಕ್ಸ್‌ಪ‍್ರೆಸ್‌’ ರೈಲಿಗೆ ಚಾಲನೆ

Published 8 ಮಾರ್ಚ್ 2024, 16:11 IST
Last Updated 8 ಮಾರ್ಚ್ 2024, 16:11 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಮಹಿಳಾ ಸಿಬ್ಬಂದಿಯೇ ಪೂರ್ಣವಾಗಿ ನಿರ್ವಹಿಸುವ ‘ರಾಣಿ ಎಕ್ಸ್‌ಪ್ರೆಸ್‌’ ರೈಲು ಬುಧವಾರ ಕಾರ್ಯಾಚರಣೆ ನಡೆಸಿತು.

ಲೋಕೊ ಪೈಲಟ್, ಸಹಾಯಕ ಲೋಕೊ ಪೈಲಟ್, ರೈಲು ನಿರ್ವಾಹಕ, ಟಿಕೆಟ್ ತಪಾಸಣೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಎಲ್ಲರೂ ಮಹಿಳೆಯರೇ ಇರುವ ಬೆಂಗಳೂರು–ಮೈಸೂರು ರಾಜ್ಯ ರಾಣಿ ಎಕ್ಸ್‌ಪ್ರೆಸ್‌ಗೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಚಾಲನೆ ನೀಡಿದರು.

ಸಿರೀಶ ಗಜನಿ ಲೋಕೊ ಪೈಲಟ್‌, ಸೋನಾ ಜಿ. ಸಹಾಯಕ ಪೈಲಟ್‌, ಪ್ರಿಯದರ್ಶಿನಿ ರೈಲು ನಿರ್ವಾಹಕಿಯಾಗಿದ್ದರು. ಕ್ಯಾರೇಜ್‌–ವ್ಯಾಗನ್‌ ಹಿರಿಯ ಸೆಕ್ಷನ್‌ ಎಂಜಿನಿಯರ್‌ ಇಂದ್ರಾಣಿ, ಮುಖ್ಯ ಟಿಕೆಟ್‌ ಪರಿವೀಕ್ಷಕರಾದ ಸಿ.ಎಸ್‌. ಭಾರತಿ, ಸಗಾಯ ಮೇರಿ, ಶಮೀಮ್‌ ಉನ್ನಿಸಾ ಬೇಗಂ ಎಂ., ಟಿಕೆಟ್‌ ಉಪ ಪರಿವೀಕ್ಷಕರಾದ ಅನಿಲಾ ಜಕಾರಿಯಾಸ್, ಸೋನಾ ವಿ.ಜೆ., ಉಮಾ ಪಿ.ಎಸ್., ವಾಣಿಜ್ಯ/ ಟಿಕೆಟ್‌ ಚೆಕ್ಕಿಂಗ್‌ ಅಧಿಕಾರಿ ಕಾಶಿಶ್ ಸಿಂಗ್, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್‌) ಕಾನ್‌ಸ್ಟೆಬಲ್‌ಗಳಾದ ರಂಜಿನಿ, ಶ್ರೀಜಾ ಪಿ.ಟಿ. ಭಾಗವಹಿಸಿದ್ದರು. ಈ ವಿಶೇಷ ರೈಲು ಒಂದು ದಿನಕ್ಕೆ ಸೀಮಿತವಾಗಿದೆ.

ಚಾಲನಾ ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿ ದಂಪತಿಗಳನ್ನು, ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT