ಬೆಂಗಳೂರು: ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿರುವ ಪಂಚಕರ್ಮ ಘಟಕಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಹೊರ ರಾಜ್ಯದವರೂ ಇಲ್ಲಿ ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ.

ಅಲೋಪಥಿ ಚಿಕಿತ್ಸಾ ಪದ್ಧತಿಯಲ್ಲಿ ಆವಿಷ್ಕಾರಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಆಯುರ್ವೇದ ಚಿಕಿತ್ಸಾ ಪದ್ಧತಿಗೂ ಬೇಡಿಕೆ ಬಂದಿದೆ. ಖಾಸಗಿ ವ್ಯವಸ್ಥೆಯಡಿ ವಿವಿಧ ಆಯುರ್ವೇದ ಚಿಕಿತ್ಸಾ ಕೇಂದ್ರಗಳು ತಲೆಯೆತ್ತುತ್ತಿದ್ದು, ಪಂಚಕರ್ಮದಂತಹ ಚಿಕಿತ್ಸೆಗಳು ದುಬಾರಿಯಾಗುತ್ತಿವೆ. ಆದ್ದರಿಂದ ಇಲ್ಲಿನ ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿನ ಪಂಚಕರ್ಮ ಚಿಕಿತ್ಸಾ ಘಟಕವನ್ನು ನವೀಕರಿಸಲಾಗಿದೆ. ಆಸ್ಪತ್ರೆಯ ಹೊರ ರೋಗಿ ವಿಭಾಗ ಹಾಗೂ ‘ಪುನರ್ನವ’ ಪಂಚಕರ್ಮ ಒಳ ರೋಗಿ ವಿಭಾಗದ ಕಟ್ಟಡದ ಮೂರು ಮಹಡಿಗಳನ್ನು ಪಂಚಕರ್ಮ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇಲ್ಲಿ 18 ಕೊಠಡಿಗಳಿದ್ದು, ಎಲ್ಲ ಕೊಠಡಿಗಳನ್ನು ನವೀಕರಣ ಮಾಡಲಾಗಿದೆ.

ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯದಡಿ 60 ವರ್ಷಗಳಿಂದ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, 300 ಹಾಸಿಗೆಗಳನ್ನು ಒಳಗೊಂಡಿದೆ. ಪ್ರತಿನಿತ್ಯ ಸರಾಸರಿ 600 ಹೊರ ರೋಗಿಗಳು ಭೇಟಿ ನೀಡುತ್ತಿದ್ದಾರೆ. 150ಕ್ಕೂ ಅಧಿಕ ಮಂದಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಒಂದಾದ ಪಂಚಕರ್ಮ ಚಿಕಿತ್ಸೆಗೆ ಇಲ್ಲಿ ಬೇಡಿಕೆ ಹೆಚ್ಚಿದ್ದು, ರಾಜ್ಯದ ವಿವಿಧ ಭಾಗಗಳಿಂದ ರೋಗಿಗಳು ಬರುತ್ತಾರೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯದವರು ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಈ ಆಸ್ಪತ್ರೆಯಲ್ಲಿ ಪಂಚಕರ್ಮದ ಜತೆಗೆ ಶಿರೋಧಾರಾ, ಬಸ್ತಿ, ನಸ್ಯ, ತರ್ಪಣ ಸೇರಿ ವಿವಿಧ ಆಯುರ್ವೇದ ಚಿಕಿತ್ಸಾ ಪದ್ಧತಿಯಡಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಆಸ್ಪತ್ರೆಯ ಆವರಣದಲ್ಲಿ ಯುನಾನಿ ಮತ್ತು ಶಲ್ಯದ ಹೊರ ರೋಗಿ ವಿಭಾಗ, ಸಿದ್ಧ ಆಸ್ಪತ್ರೆ ಹಾಗೂ ಶಲ್ಯ ತಂತ್ರ ಚಿಕಿತ್ಸಾ ಘಟಕವೂ ಇದೆ.

‘ಪಂಚಕರ್ಮವು ಐದು ಹಂತದ ಪ್ರಕ್ರಿಯೆಯಾಗಿದ್ದು, ಇದು ದೇಹದಲ್ಲಿನ ಎಲ್ಲ ತ್ಯಾಜ್ಯಗಳನ್ನು ಹೊರಹಾಕಲು ನೆರವಾಗುತ್ತದೆ. ಅದೇ ಸಮಯದಲ್ಲಿ ದೇಹವನ್ನು ಶುದ್ಧೀಕರಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ. ಶರೀರದ ದೋಷಗಳಾದ ವಾತ, ಪಿತ್ತ, ಕಫಗಳನ್ನು ತೆಗೆದು, ದೇಹದ ಧಾತುಗಳನ್ನು ಬಲಪಡಿಸುವುದೇ ಪಂಚಕರ್ಮ ಚಿಕಿತ್ಸೆಯ ಉದ್ದೇಶ. ಪಾರ್ಶ್ವವಾಯು ಸೇರಿ ವಿವಿಧ ಸಮಸ್ಯೆ ಎದುರಿಸುತ್ತಿರುವವರ ಜತೆಗೆ ಆರೋಗ್ಯವಂತರೂ ಈ ಚಿಕಿತ್ಸೆ ಪಡೆಯುತ್ತಾರೆ. ತೂಕ ಇಳಿಕೆ, ಒತ್ತಡ ನಿವಾರಣೆ ಸೇರಿ ಹಲವು ಪ್ರಯೋಜನಗಳಿವೆ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ದಿನಕ್ಕೆ ₹375 ನಿಗದಿ

ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಉಚಿತವಾಗಿ ಪಂಚಕರ್ಮ ಚಿಕಿತ್ಸೆ ಒದಗಿಸಿದರೆ ನವೀಕೃತ ಕೊಠಡಿಗಳಿಗೆ ದಿನವೊಂದಕ್ಕೆ ₹ 375 ನಿಗದಿಪಡಿಸಲಾಗಿದೆ. ಈ ಮೊದಲು ₹ 100 ನಿಗದಿಪಡಿಸಲಾಗಿತ್ತು. ನವೀಕರಣದ ಬಳಿಕ ದರ ಪರಿಷ್ಕರಣೆ ಮಾಡಲಾಗಿದೆ. ಇಲ್ಲಿ 80 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರಿಗೆ ಉಚಿತವಾಗಿ ಊಟವನ್ನೂ ಒದಗಿಸಲಾಗುತ್ತಿದೆ.

₹2.96 ಕೋಟಿಯಲ್ಲಿ ನವೀಕರಣ

ಆಸ್ಪತ್ರೆಯಲ್ಲಿನ ಪಂಚಕರ್ಮ ಚಿಕಿತ್ಸಾ ಘಟಕದ 18 ಕೊಠಡಿಗಳನ್ನು ₹2.96 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ರಾಷ್ಟ್ರೀಯ ಆಯುಷ್ ಮಿಷನ್ ಅಡಿ ಅನುದಾನ ಒದಗಿಸಲಾಗಿದೆ. ಪ್ರತಿ ಕೊಠಡಿಗೂ ಹೊಸದಾಗಿ ಪಿಠೋಪಕರಣ ಅಳವಡಿಸಿ ಬೆಳಕಿನ ಅಲಂಕಾರ ಮಾಡಲಾಗಿದೆ. ಪ್ರತಿ ಕೊಠಡಿಯ ಹೊರಾಂಗಣದಲ್ಲಿ ಸಹಾಯಕರಿಗೆ ವಿಶ್ರಾಂತಿ ಪಡೆಯಲು ಸೋಫಾಗಳನ್ನು ಇರಿಸಲಾಗಿದೆ. ಕೊಠಡಿ ಒಳಗಡೆಯೂ ಧ್ಯಾನಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ. ಪ್ರತಿ ಕೊಠಡಿಗೂ ಹೊಂದಿಕೊಂಡು ಸ್ನಾನದ ಕೋಣೆಗಳಿವೆ. ವಿಶಾಲ ಕೊಠಡಿಗಳಲ್ಲಿ ಸಹಾಯಕರೊಬ್ಬರಿಗೆ ಇರಲು ಪ್ರತ್ಯೇಕ ಕೊಠಡಿಯಿದೆ. ಗೋಡೆಗಳಿಗೆ ಮರದ ಹೊದಿಕೆಯ ವಿನ್ಯಾಸ ಮಾಡಲಾಗಿದೆ. ಮರದ ಮಸಾಜ್ ಟೇಬಲ್ ಶಿರೋಧರ ಸ್ಟ್ಯಾಂಡ್ ಬೆಡ್ ಸೇರಿ ಚಿಕಿತ್ಸೆಗೆ ಅಗತ್ಯವಿರುವ ಸಲಕರಣೆಯನ್ನು ಘಟಕ ಒಳಗೊಂಡಿದೆ. ಹೊರಗಡೆ ನಡೆದಾಡಲು ವಿಶಾಲ ಸ್ಥಳಾವಕಾಶ ಒದಗಿಸಲಾಗಿದೆ.

‘ಆಯುರ್ವೇದ ಚಿಕಿತ್ಸೆಗೆ ಒಲವು’

‘ಬದಲಾದ ಕಾಲಘಟ್ಟದಲ್ಲಿ ಆಯುರ್ವೇದ ಚಿಕಿತ್ಸೆಯತ್ತ ಜನರ ಒಲವು ಹೆಚ್ಚುತ್ತಿದೆ. ಮೂಳೆ ಮುರಿತದಂತಹ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ನಡೆಸದೆ ಈ ಚಿಕಿತ್ಸಾ ವಿಧಾನದಲ್ಲಿ ವಾಸಿ ಮಾಡಲು ಸಾಧ್ಯ. ರಾಜ್ಯದ ವಿವಿಧೆಡೆಯಿಂದ ಪಂಚಕರ್ಮದಂತಹ ಚಿಕಿತ್ಸೆ ಪಡೆಯಲು ಬರುತ್ತಾರೆ. ಹೈಟೆಕ್ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುವವರಿಗೂ ಉಚಿತವಾಗಿ ಊಟ ಒದಗಿಸಲಾಗುತ್ತಿದೆ’ ಎಂದು ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ (ಆರ್ಎಂಒ) ಡಾ. ವೆಂಕಟರಾಮಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.