ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ-ಮುಖ್ಯ) ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಆಕಾಶ್ ಬೈಜುಸ್‌ನ ವಿದ್ಯಾರ್ಥಿ ರಿಷಿ ಶೇಖರ್ ಶುಕ್ಲಾ ಅವರು, 100 ಪರ್ಸೆಂಟೈಲ್ (300ಕ್ಕೆ 300 ಅಂಕ) ಗಳಿಸುವ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

‘ತರಗತಿಯಲ್ಲಿ ಉಪನ್ಯಾಸಕರು ಮಾಡುವ ಬೋಧನೆಯನ್ನು ಗಮನವಿಟ್ಟು ಆಲಿಸಬೇಕು. ಬಳಿಕ ಮನೆಯಲ್ಲಿ ಸಮಸ್ಯಾತ್ಮಕ ಪ್ರಶ್ನೆಗಳನ್ನು ಬಿಡಿಸುವ ಅಭ್ಯಾಸ ಮಾಡಬೇಕು. ಪ್ರಶ್ನೆಗಳ ಬಗ್ಗೆ ಯಾವುದೇ ಅನುಮಾನ ಎದುರಾದರೆ ಉಪನ್ಯಾಸಕರ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಆಗಷ್ಟೇ ಯಶಸ್ಸುಗಳಿಸಲು ಸಾಧ್ಯ’ ಎಂದು ತನ್ನ ಸಾಧನೆಯ ಹಿಂದಿನ ಗುಟ್ಟನ್ನು ಹಂಚಿಕೊಂಡಿದ್ದಾರೆ.

‘ನನ್ನ ಸಾಧನೆಯಲ್ಲಿ ಆಕಾಶ್ ಬೈಜುಸ್ ಉಪನ್ಯಾಸಕರ ಕೊಡುಗೆ ದೊಡ್ಡದಿದೆ. ಗತ್ಯ ಸಂಪನ್ಮೂಲ ಒದಗಿಸುವ ಜೊತೆಗೆ, ಪರೀಕ್ಷಾ ತಯಾರಿಗೆ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ಅಲ್ಲದೇ, ಪೋಷಕರ ಸಹಕಾರ ಕೂಡ ಉತ್ತಮ ಅಂಕಗಳನ್ನು ಗಳಿಸಲು ನೆರವಾಯಿತು’ ಎಂದು ಹೇಳಿದ್ದಾರೆ.

‘ದಿನಕ್ಕೆ 7ರಿಂದ 8 ತಾಸು ಒಳ್ಳೆಯ ನಿದ್ರೆ ಮಾಡಬೇಕು. ಆಗಷ್ಟೇ ನಮ್ಮ ಮೆದುಳು ಮತ್ತು ಮನಸ್ಸು ಸರಿಯಾಗಿ ಕೆಲಸ ನಿರ್ವಹಿಸುತ್ತದೆ. ಇದು ಅಧ್ಯಯನಕ್ಕೆ ಸಹಕಾರಿಯಾಗುತ್ತದೆ’ ಎಂದು ಹೇಳಿದ್ದಾರೆ.

ಉದ್ಯಮಿಯಾಗುವ ಕನಸು: ಅಮೋಘ್

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ-ಮುಖ್ಯ) ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬೆಂಗಳೂರಿನ ಅಮೋಘ್ ಅಗರ್‌ವಾಲ್ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ಎಚ್‌ಎಸ್‌ಆರ್ ಲೇಔಟ್‌ನ ನಯರಾನ-ಕೋ-ಕಾವೇರಿ ಭವನ ಕಾಲೇಜಿನ ವಿದ್ಯಾರ್ಥಿಯಾದ ಅಮೋಘ್ ಅಗರ್‌ವಾಲ್ 100 ಪರ್ಸೆಂಟೈಲ್ ಗಳಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ 11ನೇ ರ್‍ಯಾಂಕ್ ಗಳಿಸಿದ್ದಾರೆ.

‘ಐಐಟಿ ಸೇರುವ ಗುರಿ ಹೊಂದಿದ್ದು, ಪ್ರಸ್ತುತ ಜೆಇಇ ಅಡ್ವಾನ್ಸ್‌ಗೆ ಸಿದ್ಧತೆ ನಡೆಸಿದ್ದೇನೆ. ಅಣಕು ಪರೀಕ್ಷೆಗಳ ಮೇಲೆ ಹೆಚ್ಚು ಗಮನ ಹರಿಸಿದ್ದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಯಿತು. ಭವಿಷ್ಯದಲ್ಲಿ ಉದ್ಯಮಿಯಾಗುವ ಕನಸಿದೆ’ ಎಂದು ಅಮೋಘ್ ಪ್ರತಿಕ್ರಿಯಿಸಿದರು.

ಬೆಂಗಳೂರು ಆಕಾಶ್ ಬೈಜುಸ್‌ನ 18 ವಿದ್ಯಾರ್ಥಿಗಳು 99ಕ್ಕಿಂತ ಹೆಚ್ಚಿನ ಪರ್ಸೆಂಟೈಲ್ ಹಾಗೂ ನಾಲ್ಕು ವಿದ್ಯಾರ್ಥಿಗಳು 98ಕ್ಕಿಂತ ಹೆಚ್ಚಿನ ಪರ್ಸೆಂಟೈಲ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.