ಬೆಂಗಳೂರು: ‘ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಿನಲ್ಲಿ ಚಿನ್ನಾಭರಣ ಮಳಿಗೆ ಮಾಲೀಕರಿಗೆ ಶ್ವೇತಾ ಗೌಡ ವಂಚಿಸಿದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರಿಗೆ ರಾಜ್ಯ ಹರಳು ಮತ್ತು ಆಭರಣ ದೇಶಿಯ ಪರಿಷತ್ ಮನವಿ ಸಲ್ಲಿಸಿದೆ.

‘ಈ ಪ್ರಕರಣದಲ್ಲಿ ಸತ್ಯಾಂಶವಿದ್ದರೂ ಸ್ಥಳೀಯ ಪೊಲೀಸರು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಆರೋಪಿ ಶ್ವೇತಾ ಗೌಡ ಹೊರ ರಾಜ್ಯದ ಚಿನ್ನದ ಮಾಲೀಕರಿಗೂ ವಂಚಿಸಿರುವ ಸಾಧ್ಯತೆಗಳಿವೆ. ಜೈಪುರದಲ್ಲಿ ಆಭರಣ ವ್ಯಾಪಾರಿ ಸೋಗಿನಲ್ಲಿ ತೆರಳಿದ್ದ ಶ್ವೇತಾ, ಅಲ್ಲಿನ ಹಲವು ಮಳಿಗೆಗಳ ಮಾಲೀಕರಿಗೂ ವಂಚಿಸಿರುವ ಬಗ್ಗೆ ದೂರುಗಳಿವೆ’ ಎಂದು ತಿಳಿಸಿದ್ದಾರೆ.

‘ಹಾಗಾಗಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಿ, ನ್ಯಾಯ ದೊರಕಿಸಿಕೊಡಬೇಕು’ ಎಂದು ಪರಿಷತ್ ಅಧ್ಯಕ್ಷ ಡಾ.ಬಿ.ರಾಮಾಚಾರಿ ನೇತೃತ್ವದ ನಿಯೋಗ ಕಮಿಷನರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.