ಬೆಂಗಳೂರು: ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಹಲಸೂರಿನ ಸುಧರ್ಮ ಸಾಂಸ್ಕೃತಿಕ ಸಂಘವು 2025–26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಸಂಘವು ನಡೆಸುವ ಜಾನಪದ ಡಿಪ್ಲೊಮಾ ಹಾಗೂ ವಿವಿಧ ಸರ್ಟಿಫಿಕೇಟ್ ಕೋರ್ಸ್ಗಳನ್ನು ಬೋಧಿಸಲು ಆಸಕ್ತ ಅಭ್ಯರ್ಥಿಗಳು ಇದೇ 18ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ: 94480 26212 ಸಂಪರ್ಕಿಸಬಹುದು.

ರಾಮಣ್ಣ ಸೇರಿ ನಾಲ್ವರಿಗೆ ‘ಗೌರವ ಪುರಸ್ಕಾರ’

ಬೆಂಗಳೂರು: ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನೀಡುವ 2025ನೇ ಸಾಲಿನ ಗೌರವ ಪುರಸ್ಕಾರಕ್ಕೆ ಪತ್ರಕರ್ತ ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಉದಯಭಾನು ಕಲಾಸಂಘದ ಸ್ಥಾಪಕ ಕಾರ್ಯದರ್ಶಿ ಎಂ. ನರಸಿಂಹ ಮತ್ತು ಕನ್ನಡಪರ ಹೋರಾಟಗಾರ ಸಿ.ಕೆ. ರಾಮೇಗೌಡ ಆಯ್ಕೆಯಾಗಿದ್ದಾರೆ.

ಪುರಸ್ಕಾರವು ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

ಅಕ್ಟೋಬರ್ 21ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಹಂ.ಪ. ನಾಗರಾಜಯ್ಯ, ಎಸ್.ಜಿ. ಸಿದ್ಧರಾಮಯ್ಯ ಅವರು ಗೌರವ ಪುರಸ್ಕಾರ ಪ್ರದಾನ ಮಾಡಲಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪಂಜಾಬ್ ಮಾದರಿಯಲ್ಲಿ ಬೆಳೆ ಪರಿಹಾರ ನೀಡಿ’

ಬೆಂಗಳೂರು: ‘ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಭಗವಂತ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಘೋಷಿಸಿರುವಂತೆ, ರಾಜ್ಯ ಸರ್ಕಾರವೂ ರೈತರಿಗೂ ಪ್ರತಿ ಎಕರೆಗೆ ₹ 20 ಸಾವಿರ ಪರಿಹಾರ ನೀಡಬೇಕು’ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

‘ರಾಜ್ಯದಲ್ಲಿ ಹೆಕ್ಟೇರ್ ಲೆಕ್ಕದಲ್ಲಿ ಖುಷ್ಕಿ ಭೂಮಿಯಾದರೆ ₹17,000 ಮತ್ತು ನೀರಾವರಿ ಭೂಮಿಯಾದರೆ 25,000 ಪರಿಹಾರ ಘೋಷಿಸಲಾಗಿದೆ. ಇದು ಅರೆಕಾಸಿನ ಮಜ್ಜಿಗೆಯಂತಿದೆ. ಉತ್ತರ ಕರ್ನಾಟಕದ ರೈತರು ಖಾಸಗಿ ಸಾಲ ಪಡೆದು ತೊಂದರೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ’ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ತಿಳಿಸಿದ್ದಾರೆ.

‘ಪಂಜಾಬ್ ಸರ್ಕಾರವು ಕ್ಷಿಪ್ರಗತಿಯಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆಗಳನ್ನು ಪೂರ್ಣಗೊಳಿಸಿ ದೇಶದಲ್ಲೇ ಹೆಚ್ಚಿನ ಪರಿಹಾರ ಘೋಷಿಸಿದೆ. ರಾಜ್ಯದಲ್ಲಿ ಇದುವರೆಗೂ ಜಂಟಿ ಸಮೀಕ್ಷೆ ಪೂರ್ಣಗೊಂಡಿಲ್ಲ. ಕೃಷಿ ಅಧಿಕಾರಿಗಳ ನಿಧಾನ ಗತಿಯಿಂದಾಗಿ ಮೂರ್ನಾಲ್ಕು ತಿಂಗಳಾದರೂ ಸಮೀಕ್ಷೆ ಮುಗಿಯುವುದಿಲ್ಲ’ ಎಂದು ಟೀಕಿಸಿದ್ದಾರೆ.