ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕಾಪಾಡಿ: ಮೋದಿಗೆ ಮೋಹನ್‌ದಾಸ್‌ ಪೈ ಮನವಿ

Last Updated 1 ಸೆಪ್ಟೆಂಬರ್ 2022, 21:32 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್‌, ದಯವಿಟ್ಟು ಬೆಂಗಳೂರು ಕಾಪಾಡಿ. ಬೆಂಗಳೂರಿಗೆ ನೆರವಾಗಿ’ ಎಂದು ಉದ್ಯಮಿ ಟಿ.ವಿ. ಮೋಹನ್‌ದಾಸ್‌ ಪೈ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

‘ನಮ್ಮ ರಸ್ತೆಗಳಲ್ಲಿ ಗುಂಡಿಗಳಿವೆ. ಹಲವೆಡೆ ಕಸದ ರಾಶಿ ಬಿದ್ದಿದೆ. ರಾಜಕಾಲುವೆಗಳು ಹೂಳಿನಿಂದ ತುಂಬಿವೆ. ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆದು ಜನರ ಜೀವನಮಟ್ಟ ಸುಧಾರಿಸಲು ಹೆಚ್ಚು ಹಣದ ಅಗತ್ಯವಿದೆಯೇ ಅಥವಾ ಉತ್ತಮ ಆಡಳಿತ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ನಮ್ಮ ಮೆಟ್ರೊ ಯೋಜನೆ ನಿಗದಿತ ಅವಧಿಯಲ್ಲಿ ಮುಗಿಯುತ್ತಿಲ್ಲ. ನಿಧಾನವಾಗಿ ಅನುಷ್ಠಾನಗೊಳ್ಳುತ್ತಿದೆ. ಇದು ಸಂಪೂರ್ಣ ಆಡಳಿತದ ವೈಫಲ್ಯ.ಒಟ್ಟಾರೆಯಾಗಿ ದುರಾಡಳಿತ. ದಯವಿಟ್ಟು ನಮ್ಮ ಪ್ರಮುಖ ಯೋಜನೆಗಳನ್ನು ಪರಿಶೀಲಿಸಿ’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT