ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಕಿರಣ್ ಕೊತ್ತಗೆರೆ, ‘ವರದಿ ಜಾರಿಗೆ ಸಚಿವರು ಹಾಗೂ ಶಾಸಕರ ಮನೆ ಮುಂದೆ ಧರಣಿ ಸತ್ಯಾಗ್ರಹ ಹಾಗೂ ಹೋರಾಟ ನಡೆಸುವಂತೆ ಮುನಿಯಪ್ಪ ಅವರು ಸ್ವಜಾತಿಯವರಿಗೆ ಕರೆ ನೀಡಿದ್ದಾರೆ. ಈ ವರದಿ ಪರಿಶಿಷ್ಟ ಸಮುದಾಯದ ಒಗ್ಗಟ್ಟನ್ನು ಛಿದ್ರಗೊಳಿಸಲಿದೆ. ಮುನಿಯಪ್ಪ ಅವರು ಸ್ವಪಕ್ಷೀಯ ಸಚಿವರು ಹಾಗೂ ಶಾಸಕರ ವಿರುದ್ಧ ಜನಾಂಗವನ್ನು ಎತ್ತಿ ಕಟ್ಟುವ ಪಿತೂರಿ ನಡೆಸುತ್ತಿರುವುದು ರಾಜಕೀಯ ದ್ರೋಹ. ಆದ್ದರಿಂದ ಇವರನ್ನು ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.