ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ವಿಮಾನ ನಿಲ್ದಾಣ: ಸುಧಾರಿತ ನೈರ್ಮಲ್ಯ ಕ್ರಮ

Last Updated 19 ಜೂನ್ 2020, 15:40 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ನಿಲುಗಡೆ ಪ್ರದೇಶದಿಂದ ವಿಮಾನ ಏರುವವರೆಗೆ ಸಂಪರ್ಕ ರಹಿತ ಪ್ರಕ್ರಿಯೆ ಅನುಸರಿಸುತ್ತಿದ್ದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಬಿಐಎಎಲ್‌) ಈಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸುಧಾರಿತ ನೈರ್ಮಲ್ಯ ಕ್ರಮಗಳನ್ನು ಕೈಗೊಂಡಿದೆ.

ಹೊರಗಡೆಗೆ ರವಾನೆಯಾಗುವ ಬ್ಯಾಗೇಜ್‌ಗಳಿಗೆ ಅಲ್ಟ್ರಾ ಲೋ ವ್ಯಾಲ್ಯೂಮ್‌ (ಯುಎಲ್‌ವಿ) ಮತ್ತು ಟ್ರಾಲಿಗಳಿಗೆ ಯುವಿ ಸೋಂಕು ನಿವಾರಣಾ ಕ್ರಮಗಳನ್ನು ಬಿಐಎಎಲ್‌ ಪರಿಚಯಿಸಿದೆ. ಈ ಯುಎಲ್‌ವಿ ಯಂತ್ರಗಳನ್ನು ಬಳಸಿ, ಪ್ರತಿ ಮೂರು ಗಂಟೆಗೊಮ್ಮೆ ಪ್ರದೇಶವನ್ನು ಸೋಂಕು ಮುಕ್ತಗೊಳಿಸಲಾಗುತ್ತದೆ.

ವಿಶೇಷವಾಗಿ ವಿನ್ಯಾಸಗೊಳಿಸಿರುವ ಟ್ರೇಗಳನ್ನು ಬಳಕೆಗೆ ತರಲಾಗಿದೆ. ಪ್ರತಿ ಬಳಕೆಯ ನಂತರ ಈ ಟ್ರೇಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತದೆಯಲ್ಲದೆ, ಯುವಿ ತಂತ್ರಜ್ಞಾನದ ಅಡಿ ಸ್ವಚ್ಛಗೊಳಿಸಲಾಗುತ್ತದೆ. ಇದಲ್ಲದೆ, ಟ್ರಾಲಿಗಳನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ದ್ರಾವಣದ ಸುರಂಗ (ಟನೆಲ್‌) ನಿರ್ಮಿಸಲಾಗಿದೆ.

ಅಲ್ಲದೆ, ಪಿಪಿಇ ಕಿಟ್‌ಗಳಿಂದ ಜೈವಿಕ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಿಲ್ದಾಣದ 120 ಕಡೆ ಈ ಜೈವಿಕ ತ್ಯಾಜ್ಯ ವಿಲೇವಾರಿ ಡಬ್ಬಿಗಳನ್ನು ಇರಿಸಲಾಗಿದೆ.

ಎಲ್ಲ ಕೌಂಟರ್‌ಗಳು ಮತ್ತು ಪದೇ ಪದೇ ಸ್ಪರ್ಶಿಸುವ ಸ್ಥಳ ಹಾಗೂ ವಸ್ತುಗಳಿಗೆ ‘ಸಿಲ್ವರ್‌ ನ್ಯಾನೊ ಕೋಟಿಂಗ್‌’ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ, ಮೇಲ್ಮೈ ಪ್ರದೇಶವನ್ನು ಸೋಂಕು ರಹಿತವಾಗಿಸಲು ಈ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದಪದೇ ಪದೇ ರಾಸಾಯನಿಕಗಳನ್ನು ಸಿಂಪಡಿಸುವ ಅಗತ್ಯವಿರುವುದಿಲ್ಲ ಎಂದು ಬಿಐಎಎಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT