ಕೆ.ಆರ್.ಪುರ: ‘ಕೊರೊನಾ ಸಂಕಷ್ಟದ ಸಮಯದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎನ್ನುವ ದೃಷ್ಟಿಯಿಂದ ದಿನನಿತ್ಯ 2,500 ಕ್ಕೂ ಹೆಚ್ಚು ಜನರಿಗೆ ಊಟ ವಿತರಿಸಲಾಗುತ್ತಿದೆ‘ ಎಂದು ಪಾಲಿಕೆಮಾಜಿ ಸದಸ್ಯ ಬಿ.ಎನ್.ಜಯಪ್ರಕಾಶ್ ಹೇಳಿದರು.
ಬಸವನಪುರ ವಾರ್ಡ್‌ನ ಚಿಕ್ಕ ದೇವಸಂದ್ರ, ಸಿಗೇಹಳ್ಳಿ, ಪ್ರಿಯಾಂಕನಗರ, ಸ್ವಾತಂತ್ರ್ಯನಗರ ಮುಂತಾದ ಕಡೆಗಳಲ್ಲಿ ವಲಸೆ ಕಾರ್ಮಿಕರಿಗೆ ಊಟ ವಿತರಿಸಿ ಮಾತನಾಡಿದರು.
’ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರು ಇರುವ ಸ್ಥಳಕ್ಕೆ ತೆರಳಿ ಊಟ ಪೊಟ್ಟಣ ಗಳನ್ನು ವಿತರಣೆ ಮಾಡಲಾಗುತ್ತಿದ್ದು ಲಾಕ್ ಡೌನ್ ಮುಗಿಯುವವರೆಗೂ ನಮ್ಮ ಸೇವಾ ಕಾರ್ಯ ಮುಂದುವರಿಯುತ್ತದೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.