ಬೆಂಗಳೂರು: ಓಲಾ ಕಂಪನಿಯ ಕೃತಕ ಬುದ್ಧಿಮತ್ತೆ ಅಂಗಸಂಸ್ಥೆಯಾದ ಕೃತ್ರಿಮ್ನ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಖಿಲ್ ಸೋಮವಂಶಿ ಮೃತ ಉದ್ಯೋಗಿ. ಕೆಲಸದ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ಸಹೋದ್ಯೋಗಿ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಮೇ 8ರಂದು ಘಟನೆ ನಡೆದಿದೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಪದವಿ ಪಡೆದಿದ್ದ ನಿಖಿಲ್, ವರ್ಷದ ಹಿಂದೆಯಷ್ಟೇ ಕೃತ್ರಿಮ್ ಕಂಪನಿ ಸೇರಿದ್ದರು. ಪ್ರತಿಭಾವಂತ ನಿಖಿಲ್ಗೆ ಪ್ರಾಜೆಕ್ಟ್ ಕೊಟ್ಟು, ಇಬ್ಬರು ಸಹಾಯಕರನ್ನು ನೀಡಲಾಗಿತ್ತು. ಅವರಿಬ್ಬರೂ ಕೆಲಸ ಬಿಟ್ಟಿದ್ದರಿಂದ ಎಲ್ಲ ಕೆಲಸವೂ ನಿಖಿಲ್ ಮೇಲೆ ಬಿದ್ದಿತ್ತು ಎಂದು ಹೇಳಲಾಗಿದೆ.

ಅಮೆರಿಕದಲ್ಲಿರುವ ಕಂಪನಿಯ ವ್ಯವಸ್ಥಾಪಕ, ಮೀಟಿಂಗ್ನಲ್ಲಿ ಅವರನ್ನು ನಿಂದಿಸುತ್ತಿದ್ದರು ಎಂದು ಸಹೋದ್ಯೋಗಿ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೃತ್ರಿಮ್ ಕಂಪನಿ, ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ಅಗತ್ಯ ಇರುವ ಎಲ್ಲ ಸಹಾಯ ನೀಡುವುದಾಗಿ ಭರವಸೆ ನೀಡಿದೆ.

ಘಟನೆ ನಡೆದಾಗ ನಿಖಿಲ್ ವೈಯಕ್ತಿಕ ಕಾರಣಕ್ಕೆ ರಜೆ ಪಡೆದಿದ್ದರು. ಏಪ್ರಿಲ್ 8 ರಂದು ವಿಶ್ರಾಂತಿಗೆ ರಜೆ ಬೇಕೆಂದು ತನ್ನ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಏಪ್ರಿಲ್ 17ರಂದು ಮತ್ತಷ್ಟು ವಿಶ್ರಾಂತಿ ಬೇಕಿದೆ ಎಂದ ಕಾರಣ ರಜೆ ವಿಸ್ತರಿಸಲಾಗಿತ್ತು ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.