ಕೆಎಸ್ಆರ್ಟಿಸಿ: 1013 ನೌಕರರ ಅಂತರ ನಿಗಮ ವರ್ಗಾವಣೆ

ಬೆಂಗಳೂರು: ಅಂತರ ನಿಗಮ ವರ್ಗಾವಣೆಗೆ ಕೋರಿ ಅರ್ಜಿ ಸಲ್ಲಿಸಿದ್ದ 4,665 ಸಾರಿಗೆ ಸಂಸ್ಥೆಗಳ ನೌಕರರ ಪೈಕಿ 1,013 ನೌಕರರನ್ನು ವರ್ಗಾವಣೆ ಮಾಡಿ ಕೆಎಸ್ಆರ್ಟಿಸಿ ಆದೇಶ ಹೊರಡಿಸಿದೆ.
ದರ್ಜೆ–3 ಮೇಲ್ವಿಚಾರಕೇತರ ಮತ್ತು ದರ್ಜೆ– 4ರ ನೌಕರರ ವರ್ಗಾವಣೆಯ ಆದೇಶ ಪತ್ರಗಳನ್ನು ಕೆಎಸ್ಆರ್ಟಿಸಿ ವೆಬ್ಸೈಟ್ ksrtc.karnataka.gov.inನಲ್ಲಿ ಬುಧವಾರ ಪ್ರಕಟಿಸಿದೆ. ಸೇವಾ ಜೇಷ್ಠತೆ ಮತ್ತು ಹಾಲಿ ಹುದ್ದೆಗಳಿಗೆ ಅನುಗುಣವಾಗಿ ಕೌನ್ಸೆಲಿಂಗ್ ಮೂಲಕ ವಿಭಾಗಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೆಎಸ್ಆರ್ಟಿಸಿ ನಿರ್ದೇಶಕರು(ಸಿಬ್ಬಂದಿ ಮತ್ತು ಜಾಗೃತ) ತಿಳಿಸಿದ್ದಾರೆ.
ಡಿ.5ರಿಂದ 15ರ ತನಕ ವೆಬ್ಸೈಟ್ನಲ್ಲಿ (ksrtc.org/counseling) ಕೌನ್ಸೆಲಿಂಗ್ ನಡೆಸಲಾಗುವುದು. ಈ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ನಲ್ಲಿ ನಡೆಯುವುದರಿಂದ ಲಿಖಿತ ಅರ್ಜಿಗಳ ಆಧಾರದ ಮೇಲೆ ಯಾವುದೇ ಕ್ರಮ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.