ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಕಾರ್ಮಿಕನ ಕೊಲೆ: ನಾಲ್ವರ ಬಂಧನ

Published : 23 ಆಗಸ್ಟ್ 2024, 16:54 IST
Last Updated : 23 ಆಗಸ್ಟ್ 2024, 16:54 IST
ಫಾಲೋ ಮಾಡಿ
Comments

ಬೆಂಗಳೂರು: ಬಣ್ಣದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಕಾಟನ್‌ಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಜೈಭೀಮ್‌ ನಗರದ ಮನೋಜ್‌, ದೊರೆಸ್ವಾಮಿ ನಗರದ ನಿರಂಜನ್‌, ರಾಮಕೃಷ್ಣ ಸೇವಾನಗರದ ನವೀನ್‌ ಹಾಗೂ ಎ.ಶರತ್‌ ಬಂಧಿತರು. ಯುವತಿ ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಕೆ.ಪಿ.ಅಗ್ರಹಾರದ ಮಾರ್ಕಂಡೇಶ್ವರ ನಗರದ ನಿವಾಸಿ ಶರತ್ ಕುಮಾರ್ ಎಂಬುವವರನ್ನು ಕೊಲೆ ಮಾಡಿದ್ದರು.

‘ಗುರುವಾರ ಬೆಳಿಗ್ಗೆ ಅಂಜನಪ್ಪ ಗಾರ್ಡನ್‌ನಲ್ಲಿ ನೆಲೆಸಿದ್ದ ಶರತ್‌ ಅವರ ಪರಿಚಯಸ್ಥರೊಬ್ಬರು ಮೃತಪಟ್ಟಿದ್ದರು. ಅಂತಿಮ ದರ್ಶನ ಪಡೆಯಲು ಶರತ್‌ ಬಂದಿದ್ದರು. ಅಂತಿಮ ದರ್ಶನದ ವೇಳೆ ಶರತ್ ಅವರು ಯುವತಿಗೆ ನಿಂದಿಸಿದ್ದರು. ಆ ಯುವತಿ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ಅವರು ಶರತ್‌ ಅವರನ್ನು ಅಡ್ಡಗಟ್ಟಿ ಕೊಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ಮನೋಜ್ ಕುಮಾರ್‌ 
ಮನೋಜ್ ಕುಮಾರ್‌ 
ಶರತ್‌
ಶರತ್‌
ನಿರಂಜನ್‌ 
ನಿರಂಜನ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT