‘ನಿಜಲಿಂಗಪ್ಪ ಅವರು ಬದ್ಧತೆ ಹೊಂದಿದ್ದರು. ಅವರು ರಾಜಕೀಯದಲ್ಲಿ ಎಂದೂ ಓಲೈಕೆ ಮಾಡಿದವರಲ್ಲ. ಕರ್ನಾಟಕದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದ್ದರು. ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿದ್ದ ಅವರು, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದ್ದರು. ಬೆಂಗಳೂರು ಸಕ್ಕರೆ ಕಾರ್ಖಾನೆ, ಕಾರವಾರ ಮತ್ತು ಮಂಗಳೂರು ಬಂದರು ನಿರ್ಮಾಣ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಸ್ಥಾಪನೆ ಸೇರಿ ಹಲವು ಯೋಜನೆಗಳು ಅವರ ಕಾಲದಲ್ಲಿ ಕಾರ್ಯಗತವಾಗಿದ್ದವು. ಕರ್ನಾಟಕ ವೈದ್ಯಕೀಯ ಕಾಲೇಜನ್ನು ಸರ್ಕಾರವೂ ನಡೆಸಬಹುದು ಎಂಬುದಕ್ಕೆ ಅವರು ಪ್ರೇರಣೆ. ಅವರ ಜಯಂತಿ ಆಚರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ’ ಎಂದರು.