ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ವಾಹನದಲ್ಲಿ ಅಕ್ರಮ ಮದ್ಯ ಸಾಗಣೆ: ಇಬ್ಬರ ಬಂಧನ

58 ಬಾಕ್ಸ್ ಮದ್ಯ ಜಪ್ತಿ
Last Updated 9 ಜೂನ್ 2021, 18:42 IST
ಅಕ್ಷರ ಗಾತ್ರ

ಬೆಂಗಳೂರು: ತರಕಾರಿ ಚೀಲಗಳನ್ನು ತುಂಬಿದ ವಾಹನದಲ್ಲಿ ಭಾರಿ ಪ್ರಮಾಣದ ಮದ್ಯದ ಬಾಕ್ಸ್‌ಗಳನ್ನು ತಮಿಳುನಾಡಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಜಾಲವನ್ನು ಕೆ.ಆರ್.ಮಾರುಕಟ್ಟೆ ಪೊಲೀಸರು ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸಿದ್ದಾರೆ.

ವಾಹನದ ಚಾಲಕ ತಮಿಳುನಾಡಿನ ರಾಮಕೃಷ್ಣನ್ (24) ಹಾಗೂ ರಾಜಕುಮಾರ್ (27) ಬಂಧಿತರು.

ವಾಹನ ತಪಾಸಣೆಗೆಂದು ಕೆ.ಆರ್.ಮಾರುಕಟ್ಟೆ ಬಳಿ ಹಾಕಲಾಗಿದ್ದ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

‘ಒಟ್ಟು 58 ಬಾಕ್ಸ್‌ಗಳಲ್ಲಿ 509 ಲೀಟರ್‌ಗಳಷ್ಟು ಮದ್ಯದ ಬಾಕ್ಸ್‌ಗಳನ್ನು ತರಕಾರಿ ಚೀಲಗಳಲ್ಲಿ ತುಂಬಿಸಿ, ಕಳ್ಳಸಾಗಣೆ ಮಾಡಲು ಮುಂದಾಗಿದ್ದರು. ತಪಾಸಣೆ ವೇಳೆ ಆರೋಪಿಗಳನ್ನು ಬಂಧಿಸಿ, ಮದ್ಯದ ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ತಮಿಳುನಾಡಿನಲ್ಲಿ ಸದ್ಯ ಮದ್ಯ ಮಾರಾಟ ನಿಷೇಧಿಸಿರುವುದರಿಂದ ಮದ್ಯವನ್ನು ಬೆಂಗಳೂರಿನಿಂದ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುತ್ತಿದ್ದರು. ಬೇಡಿಕೆ ಇರುವುದರಿಂದ ಕಡಿಮೆ ಬೆಲೆಯ ಮದ್ಯವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಗತ್ಯ ಸೇವೆಯಡಿ ತರಕಾರಿ ಸರಬರಾಜಿಗೆ ಅವಕಾಶ ಕಲ್ಪಿಸಿರುವುದರಿಂದ ತರಕಾರಿ ಚೀಲಗಳಲ್ಲಿ ಮದ್ಯ ಸಾಗಿಸುವ ಉಪಾಯ ಮಾಡಿದ್ದರು’ ಎಂದೂ ಮಾಹಿತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT