ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯೋತ್ಸವ -ಕಾವ್ಯೋತ್ಸವ’ | ಬರೆದು ಮುಗಿಯದ ಕವಿತೆ: ಜೋಗಿ

Published 27 ನವೆಂಬರ್ 2023, 21:07 IST
Last Updated 27 ನವೆಂಬರ್ 2023, 21:07 IST
ಅಕ್ಷರ ಗಾತ್ರ

ಬೆಂಗಳೂರು: ಕಾದಂಬರಿ ಬರೆದರೆ ಮುಗಿಯುತ್ತದೆ. ಕವಿತೆ ಮುಗಿಯುವುದಿಲ್ಲ. ನಿರಂತರವಾಗಿರುತ್ತದೆ ಎಂದು ಬರಹಗಾರ ಜೋಗಿ ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಪ್ನಬುಕ್ ಹೌಸ್ ಆಯೋಜಿಸಿದ್ದ ‘ರಾಜ್ಯೋತ್ಸವ -ಕಾವ್ಯೋತ್ಸವ’ ಕವಿಗೋಷ್ಶಿಯಲ್ನಿ ಮಾತನಾಡಿದರು.

ಕವಿತೆಯೇ ಒಂದು ಬಂಡಾಯ. ಪ್ರತಿಯೊಂದು ಕವಿತೆಯೂ ಪ್ರತಿಭಟನೆ. ಒಂದು ಕವಿತೆ ಇನ್ನೊಂದರ ತರಹ ಇರುವುದಿಲ್ಲ. ಕವಿಯ ವ್ಯಕ್ತಿತ್ವದ ಗುರುತಾಗಿರುತ್ತದೆ. ಕವಿಗೂ ಓದುಗನಿಗೂ ಬಹಳ ಮಾನಸಿಕ ಸಂಬಂಧವಿರುತ್ತದೆ ಎಂದರು.

24 ಕವಿಗಳು ಕವನ ವಾಚನ ಮಾಡಿದರು. ನಾಟಕಕಾರ ಬೇಲೂರು ರಘುನಂದನ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ದೊಡ್ಡೇಗೌಡ ಸ್ವಾಗತಿಸಿದರು. ಸಪ್ನಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT