ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಮಹಿಳೆಯರ ಪರ ಕೆಲಸ: ಸೌಮ್ಯಾರೆಡ್ಡಿ ಭರವಸೆ

Published 12 ಏಪ್ರಿಲ್ 2024, 23:15 IST
Last Updated 12 ಏಪ್ರಿಲ್ 2024, 23:15 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾತಂತ್ರ್ಯ ಬಂದ ನಂತರ ಬೆಂಗಳೂರಿನಿಂದ ಒಬ್ಬ ಮಹಿಳೆಯೂ ಲೋಕಸಭೆಯನ್ನು ಪ್ರವೇಶಿಸಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿದ್ದು, ಅವರ ಪರ ಕೆಲಸ ಮಾಡಲು ನನ್ನನ್ನು ಅವರು ಗೆಲ್ಲಿಸುತ್ತಾರೆ’ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಶೋಕ ನಗರದಲ್ಲಿ ಚುನಾವಣೆ ಪ್ರಚಾರ ನಡೆಸಿ, ವಿವಿಧ ಕ್ಷೇತ್ರದ ಮುಖಂಡರು, ಮಹಿಳಾ ಸಂಘಟನೆಗಳ ಜೊತೆಗೆ ಅವರು ಸಂವಾದ ನಡೆಸಿದರು.

‘ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದರಿಂದ ನಗರದ ಇಂಚಿಂಚು ಅರಿವು ನನಗಿದೆ. ನಮ್ಮ ತಂದೆ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದಾಗ ಅವರು ಮಾಡಿದ್ದ ಕೆಲಸಗಳಿಂದ ಇಂದು ಬೆಂಗಳೂರು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ’ ಎಂದರು.

‘ನಮ್ಮ ತಂದೆ ಮುಜರಾಯಿ ಇಲಾಖೆ ಸಚಿವರಾದ ನಂತರ ಆ ಇಲಾಖೆಯಲ್ಲಿ ಆಗುತ್ತಿರುವ ಎಲ್ಲಾ ಅಭಿವೃದ್ಧಿ ಬೆಳವಣಿಗಳನ್ನು ನೋಡಿ, ಎಲ್ಲಾ ಸಮಾಜದ ಜನರು ಈ ಬಾರಿ ನನ್ನ ಕೈ ಹಿಡಿಯಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT