ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ: ರಕ್ಷಾ ರಾಮಯ್ಯ ಪರ ಪ್ರಚಾರಕ್ಕೆ ಚಾಲನೆ

Published 13 ಏಪ್ರಿಲ್ 2024, 22:30 IST
Last Updated 13 ಏಪ್ರಿಲ್ 2024, 22:30 IST
ಅಕ್ಷರ ಗಾತ್ರ

ಯಲಹಂಕ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಚುನಾವಣಾ ಪ್ರಚಾರ ಕಾರ್ಯಕ್ಕೆ ವಿಧಾನಪರಿಷತ್‌ ಮಾಜಿ ಸದಸ್ಯ ಎಂ.ಆರ್‌. ಸೀತಾರಾಂ, ಯಲಹಂಕ ಹಳೇನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ತನ್ನದೇ ಆದ ಕನಸು ಕಟ್ಟಿಕೊಂಡಿರುವ ರಕ್ಷಾರಾಮಯ್ಯ ಅವರನ್ನು ಈ ಬಾರಿ ಗೆಲ್ಲಿಸಬೇಕು. ಆ ಮೂಲಕ ಜನರ ಸೇವೆಮಾಡಲು ಯುವಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಎಂ.ಆರ್‌. ಸೀತಾರಾಂ ಮನವಿ ಮಾಡಿದರು.

ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು, ದೇವಸ್ಥಾನದಿಂದ ಹೊರಟು ಪೇಟೆ, ಡೌನ್‌ ಬಜಾರ್‌, ಬಸ್‌ ನಿಲ್ದಾಣ, ಹೊಸಬೀದಿ, ಆಸ್ಪತ್ರೆ ರಸ್ತೆ ಮತ್ತಿತರ ಕಡೆಗಳಲ್ಲಿ ಮನೆಮನೆಗೆ ತೆರಳಿ ಮತ ಯಾಚಿಸಿದರು.

ಮಾಜಿ ಶಾಸಕ ಬಿ. ಪ್ರಸನ್ನಕುಮಾರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎನ್‌. ಗೋಪಾಲಕೃಷ್ಣ, ಕೆಪಿಸಿಸಿ ಸದಸ್ಯ ಎಸ್.ಬಿ. ಬಾಷಾ, ಕಾಂಗ್ರೆಸ್‌ ಮುಖಂಡರಾದ ಕೇಶವ ಬಿ. ರಾಜಣ್ಣ, ವೈ.ಆರ್‌. ಶ್ರೀಧರ್‌, ಎನ್‌.ಎಂ. ಶ್ರೀನಿವಾಸ್‌, ಎ.ಎನ್‌. ಸಂತೋಷ್‌ಕುಮಾರ್‌, ಗೋಪಿ, ರಾಜಕುಮಾರ್‌, ಎನ್‌. ತಿಮ್ಮರಾಜು, ಸಿ. ಶಶಿಕುಮಾರ್‌, ಮಂಗಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT